ಮುಂಬೈ: ಯುದ್ದ ಭಾದಿತ ಉಕ್ರೇನ್ ನಿಂದ ಮೊದಲ ಬಾರಿಗೆ 219 ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿದೆ. ಉಕ್ರೇನ್ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನಗಳ ಕಾರ್ಯಾಚರಣೆ ಬಂದ್ ಆಗಿರುವುದರಿಂದ ನೆರೆಯ ರೊಮಾನಿಯಾದಿಂದ ಟೇಕ್ ಆಫ್ ಆದ ವಿಮಾನ, ಮುಂಬೈಗೆ ಬಂದಿಳಿದಿದೆ.
ಉಕ್ರೇನ್ ನಲ್ಲಿದ್ದ ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿ ವಿಮಾನ ಮುಂಬೈಗೆ ಬಂದಿಳಿಯುತ್ತಿದ್ದಂತೆ ಕೇಂದ್ರ ಸಚಿವ ಪಿಯೂಷ್ ಗೋಯೆಲ್, ತಾಯ್ನಾಡಿಗೆ ಬರಮಾಡಿಕೊಂಡರು. ನಂತರ ಅವರೊಂದಿಗೆ ಸಂವಾದ ನಡೆಸಿದ ಸಚಿವರು, ಸರ್ಕಾರ ಬೆನ್ನಿಗಿದ್ದು, ಉಕ್ರೇನ್ ನಲ್ಲಿರುವ ತಮ್ಮ ಸ್ನೇಹಿತರಿಗೆ ತಿಳಿಸುವಂತೆ ಹೇಳಿದರು.
ಈ ಕುರಿತು ಟ್ವೀಟ್ ಮಾಡಿರುವ ಪಿಯೂಷ್ ಗೋಯೆಲ್, ಉಕ್ರೇನ್‌ನಿಂದ ಸುರಕ್ಷಿತವಾಗಿ ಸ್ಥಳಾಂತರಗೊಂಡ ಭಾರತೀಯರ ಮುಖದಲ್ಲಿನ ನಗು ನೋಡಿ ಸಂತೋಷವಾಯಿತು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಪ್ರತಿಯೊಬ್ಬ ಭಾರತೀಯರ ಸುರಕ್ಷತೆಗಾಗಿ ಶ್ರಮಿಸುತ್ತಿರುವುದಾಗಿ ತಿಳಿಸಿದ್ದಾರೆ.