ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪ್ರತಿಷ್ಠಾ ವಧರ್ಂತಿಯು ಫೆ. .22 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಕಟೀಲಿನ ಬ್ರಹ್ಮಶ್ರೀ ಕಮಲಾದೇವೀ ಪ್ರಸಾದ ಆಸ್ರಣ್ಣರವರ ಆಚಾರ್ಯತ್ವದಲ್ಲಿ, ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಅಧಿವಾಸ ಹೋಮ,ಕಲಶಾಧಿವಾಸ, ನವಚಂಡೀ ಯಾಗ, ನಾಗಸನ್ನಿಧಿಯಲ್ಲಿ ನವಕಕಲಶ,ನಾಗತನು ಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಇದೇ ಸಂದರ್ಭದಲ್ಲಿ ಶ್ರೀಮಠದ ದಕ್ಷಿಣ ಗೋಪುರವನ್ನು ಮಾನ್ಯ ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿಯವರು ಉದ್ಘಾಟಿಸಲಿದ್ದಾರೆ. ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಸÀರ್ಕಾರದ ರಾಜ್ಯಸಚಿವ ಶ್ರೀಪಾದ್ ಯಸ್ಸೋ ನಾಯಕ್ ವಹಿಸಲಿದ್ದು,ಮಾಣಿಲ ಮತ್ತು ಕೊಂಡೆವೂರು ಶ್ರೀಗಳು ಆಶೀರ್ವಚನ ನೀಡಲಿದ್ದಾರೆ. ಕಟೀಲಿನ ಬ್ರಹ್ಮಶ್ರೀ ಅನಂತ ಪದ್ಮನಾಭ ಆಸ್ರಣ್ಣ ಹಾಗೂ ಕೇರಳ ಧರ್ಮಾಚಾರ್ಯ ಸಭಾದ ಪ್ರಧಾನ ಸಂಚಾಲಕ, ಬ್ರಹ್ಮಶ್ರೀ ಮುಲ್ಲಪ್ಪಳ್ಳಿ ಕೃಷ್ಣನ್ ನಂಬೂದಿರಿ ಇವರ ದಿವ್ಯ ಉಪಸ್ಥಿತಿಯಲ್ಲಿ ಮುಖ್ಯ ಅತಿಥಿಗಳಾಗಿ ಕೆ.ಸಿ.ರಾಮಮೂರ್ತಿ, ಆಶ್ರಮದ ವಿಶ್ವಸ್ಥ ಮತ್ತು ರಾಜ್ಯಸಭಾ ಸದಸ್ಯ ನಾರಾಯಣ್ ಬೆಂಗಳೂರು, ಆಶ್ರಮದ ವಿಶ್ವಸ್ಥ ಮತ್ತು ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಆಳ್ವಾಸ್ ಅಧ್ಯಕ್ಷ ಡಾ.ಮೋಹನ್ ಆಳ್ವ ಮೂಡಬಿದ್ರೆ, ನಾರಾಯಣ ಹೆಗ್ಡೆ ಕೋಡಿಬೈಲು, ಆಶ್ರಮದ ವಿಶ್ವಸ್ಥ ಮತ್ತು ಉದ್ಯಮಿ ಮಹಾಬಲೇಶ್ವರ ಭಟ್ ಎಡಕ್ಕಾನ ಮತ್ತು ಹರಿನಾಥ ಭಂಡಾರಿ ಮುಳಿಂಜ ಉಪಸ್ಥಿತರಿರುವರು. ಫೆ. 20 ರಂದು ಸೂರ್ಯಾಸ್ತದಿಂದ 21 ಸೂರ್ಯಾಸ್ತದವರೆಗೆ ಏಕಾಹ ಭಜನೆ ನಡೆಯಲಿದೆ. .22 ರಂದು ರಾತ್ರಿ 8. ರಿಂದ ಯಕ್ಷಕಲಾ ಭಾರತಿ ಮಂಗಲ್ಪಾಡಿ ಇವರಿಂದ "ಭಸ್ಮಾಸುರ ಮೋಹಿನಿ-ಮಹಿಷಿ ವಧೆ" ಯಕ್ಷಗಾನ ಪ್ರದರ್ಶನ ನಡೆಯಲಿದೆ.