ನವದೆಹಲಿ: ಓಮಿಕ್ರಾನ್ ಭೀತಿಯಿಂದಾಗಿ 3ನೇ ಅಲೆಯಲ್ಲಿರುವ ಭಾರತದಲ್ಲಿ ದಿನ ಕ್ರಮೇಣ ಸೋಂಕಿನ ಪ್ರಮಾಣ ತಗ್ಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 27,409 ಹೊಸ ಸೋಂಕು ಪ್ರಕರಣಗಳು ವರದಿಯಾಗಿದೆ.
ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 27,409 ಹೊಸ ಸೋಂಕು ಪ್ರಕರಣಗಳು ದಾಖಲಾಗಿದೆ. ಅಂತೆಯೇ ಇದೇ ಅವಧಿಯಲ್ಲಿ ಕೋವಿಡ್ ನಿಂದಾಗಿ 347 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಒಟ್ಟಾರೆ ಸಾವಿನ ಸಂಖ್ಯೆ 5,09,358ಕ್ಕೆ ಏರಿಕೆಯಾಗಿದೆ.
ಇಂದಿನ ಹೊಸ ಸೋಂಕು ಪ್ರಕರಣಗಳೊಂದಿಗೆ ದೇಶದಲ್ಲಿನ ಸೋಂಕು ಸಕಾರಾತ್ಮಕ ದರ ಶೇ.2.23ಕ್ಕೆ ಕುಸಿದಿದೆ. 24 ಗಂಟೆಗಳಲ್ಲಿ ದೇಶಾದ್ಯಂತ 82,817 ಮಂದಿ ಸೋಂಕಿತರು ಗುಣಮುಖರಾಗಿದ್ದು ಆ ಮೂಲಕ ಗುಣಮುಖರ ಪ್ರಮಾಣ 4,17,60,458ಕ್ಕೇರಿದೆ.