ನವದೆಹಲಿ: ಯುದ್ಧ ಭಾದಿತ ಉಕ್ರೇನ್ ನಿಂದ ಭಾರತೀಯರನ್ನು ಆಪರೇಷನ್ ಗಂಗಾ ಹೆಸರಿನಲ್ಲಿ ಸ್ಥಳಾಂತರಿಸಲಾಗುತ್ತಿದ್ದು, 240 ಭಾರತೀಯರನ್ನೊಳಗೊಂಡ ಆರನೇ ವಿಮಾನ ಬುಡಾಪೆಸ್ಟ್ ನಿಂದ ನವದೆಹಲಿಗೆ ಬಂದಿಳಿಯಿತು.
ಹಂಗೇರಿಯಾದ ರಾಜಧಾನಿ ಬುಡಾಪೆಸ್ಟ್ ನಿಂದ ಆಗಮಿಸಿದ ಭಾರತೀಯ ವಿದ್ಯಾರ್ಥಿಗಳನ್ನು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವೀ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.
ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಕೂಡಾ ಟ್ವೀಟ್ ಮಾಡಿದ್ದು, ಸ್ಥಳಾಂತರ ಪ್ರಕ್ರಿಯೆಯನ್ನು ಮುಂದುವರೆಸಿದ್ದು, ಆರನೇ ವಿಮಾನದಲ್ಲಿ 240 ಭಾರತೀಯರು ಸ್ವದೇಶಕ್ಕೆ ಆಗಮಿಸಿರುವುದಾಗಿ ತಿಳಿಸಿದ್ದಾರೆ.
ಈವರೆಗೂ ಉಕ್ರೇನ್ ನಿಂದ ಸುಮಾರು 1,137 ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.