ನವದೆಹಲಿ: ಓಮಿಕ್ರಾನ್ ಕೋವಿಡ್-19 ರೂಪಾಂತರಿ ಒಂದು ಸೈಲೆಂಟ್ ಕಿಲ್ಲರ್ ಆಗಿದೆ. ಅಧಿಕ ಒತ್ತಡದಿಂದ ಚೇತರಿಸಿಕೊಳ್ಳಲು ಧೀರ್ಘ ಸಮಯಾವಕಾಶ ತೆಗೆದುಕೊಳ್ಳುತ್ತದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಎನ್. ವಿ. ರಮಣ ಬುಧವಾರ ಹೇಳಿದ್ದಾರೆ.
ಸಂಪೂರ್ಣ ಭೌತಿಕ ವಿಚಾರಣೆಗೆ ಮರಳುವಂತೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಮತ್ತು ಹಿರಿಯ ವಕೀಲ ವಿಕಾಸ್ ಸಿಂಗ್ ಒತ್ತಾಯಿಸಿದ ಬೆನ್ನಲ್ಲೇ, ಸಿಜೆಐ ಈ ರೀತಿಯ ಹೇಳಿಕೆ ನೀಡಿದ್ದಾರೆ. ಇದೀಗ 15 ಸಾವಿರ ಪ್ರಕರಣಗಳಿಗೆ ಏರಿಕೆಯಾಗಿರುವುದಾಗಿ ಸಮಾಲೋಚನೆ ವೇಳೆ ಸಿಜೆಐ ಹೇಳಿದರು.
ಓಮಿಕ್ರಾನ್ , ಹೆಚ್ಚು ಸೌಮ್ಯವಾಗಿರುತ್ತದೆ ಎಂದು ಸಿಂಗ್ ಹೇಳಿದರು. ಆದಾಗ್ಯೂ, ಮೊದಲ ಅಲೆಯಲ್ಲಿ ನಾಲ್ಕು ದಿನಗಳಲ್ಲಿ ಗುಣಮುಖನಾಗಿದ್ದೆ. ಆದರೆ, ಮೂರನೇ ಅಲೆ ವೇಳೆಯಲ್ಲಿ ಗುಣಮುಖವಾಗಲು ಹೆಚ್ಚಿನ ಸಮಯ ಹಿಡಿದಿದೆ. ಇದೊಂದು ಸೈಲೆಂಟ್ ಕಿಲ್ಲರ್ ಆಗಿದೆ. 25 ದಿನಗಳಾಗಿದೆ. ಇನ್ನೂ ನಾನು ಸೋಂಕಿನಿಂದ ಬಳಲುತ್ತಿರುವುದಾಗಿ ರಮಣ ತಿಳಿಸಿದರು.
ಈ ವಿಷಯದಲ್ಲಿ ನಿಮ್ಮ ಅದೃಷ್ಟ ಸರಿಯಾಗಿಲ್ಲ. ಆದರೆ ಜನರು ಗುಣಮುಖರಾಗುತ್ತಿದ್ದಾರೆ ಎಂದು ವಿಕಾಸ್ ಸಿಂಗ್ ಹೇಳಿದರು. ನಾವು ನೋಡೋಣ ಎಂದು ಸಿಜೆಐ ಹೇಳಿದರು.