ಕಾಸರಗೋಡು: ಸ್ವಾತಂತ್ರ ದಿನಾಚರಣೆಯ 75ನೇ ವರ್ಷಾಚರಣೆಯ ಅಂಗವಾಗಿ ದೇಶಕ್ಕಾಗಿ ಸ್ವಾತಂತ್ರ್ಯ ಚಳವಳಿ ಮತ್ತು ಹೋರಾಟಗಳಲ್ಲಿ ಭಾಗವಹಿಸಿದ ಜಿಲ್ಲೆಯ ನಾಯಕರನ್ನು ಗೌರವಿಸಲಾಗುವುದು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಮಾಹಿತಿ ಕಚೇರಿ ವತಿಯಿಂದ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಫೆ.25ರಂದು ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಾದ ಕ್ಯಾಪ್ಟನ್ ಕೆ.ಎಂ.ಕುಂಜಿಕಣ್ಣನ್ ನಂಬಿಯಾರ್ ಹಾಗೂ ಕೆ.ವಿ.ನಾರಾಯಣನ್ ಅವರನ್ನು ಸನ್ಮಾನಿಸಲಾಗುವುದು. ಬೆಳಿಗ್ಗೆ 11 ಗಂಟೆಗೆ ಪಡನ್ನಕ್ಕಾಡ್ ನೆಹರು ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಎನ್‍ಎಸ್‍ಎಸ್ ಘಟಕದ ಸಹಯೋಗದಲ್ಲಿ ಆಯೋಜಿಸಲಾಗುವ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆ.ವಿ.ನಾರಾಯಣನ್ ಅವರನ್ನು ಸನ್ಮಾನಿಸಲಾಗುವುದು. ಸಬ್ ಕಲೆಕ್ಟರ್ ಡಿ.ಆರ್.ಮೇಘಶ್ರೀ ಉದ್ಘಾಟಿಸುವರು.ಇತಿಹಾಸ ತಜ್ಞ ಪ್ರಾಧ್ಯಾಪಕ ಕೆ.ಪಿ.ಜಯರಾಜನ್ ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಿಸುವರು. ಕಾಲೇಜಿನ ಪ್ರಾಂಶುಪಾಲ ಡಾ. ಕೆ.ವಿ.ಮುರಳಿ ಅಧ್ಯಕ್ಷತೆ ವಹಿಸುವರು. ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿಗಳಾದ ವಿ.ವಿಜಯಕುಮಾರ್ ಮತ್ತು ಬಿಜು ಎನ್.ಡಿ, ಕಾಲೇಜು ಯೂನಿಯನ್ ಅಧ್ಯಕ್ಷ ಅನಂತು ಮತ್ತು ಎನ್‍ಎಸ್‍ಎಸ್ ಸ್ವಯಂಸೇವಕ ಕಾರ್ಯದರ್ಶಿ ನಕ್ಷತ್ರ ಮಾತನಾಡುವರು.
ಮಧ್ಯಾಹ್ನ 3 ಗಂಟೆಗೆ ಕಲೆಕ್ಟರೇಟ್ ಸಭಾಂಗಣದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕ್ಯಾಪ್ಟನ್ ಕೆ.ಎಂ.ಕುಂಞÂ್ಞ ಕಣ್ಣನ್ ನಂಬಿಯಾರ್ ಅವರನ್ನು ಸನ್ಮಾನಿಸಲಾಗುವುದು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಉದ್ಘಾಟಿಸುವರು. ಎಡಿಎಂ ಎ.ಕೆ.ರಾಮೇಂದ್ರನ್ ಅಧ್ಯಕ್ಷತೆ ವಹಿಸುವರು. ಸಾಕ್ಷರತಾ ಮಿಷನ್ ಜಿಲ್ಲಾ ಕಾರ್ಯಕಾರಿ ಸದಸ್ಯ ಕೆ.ವಿ.ರಾಘವನ್ ಮಾಸ್ಟರ್ ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಿಸುವರು. ನೆಹರು ಯುವ ಕೇಂದ್ರದ ಜಿಲ್ಲಾ ಯುವ ಕಾರ್ಯಕ್ರಮ ಅಧಿಕಾರಿ ಪಿ.ಅಖಿಲ್, ಕಲೆಕ್ಟರೇಟ್ ಸಿಬ್ಬಂದಿ ಮಂಡಳಿ ಕಾರ್ಯದರ್ಶಿ ಜಿ.ಸುರೇಶ್ ಬಾಬು ಮಾತನಾಡುವರು.
ಕೆ ವಿ ನಾರಾಯಣನ್:
1955ರಲ್ಲಿ ಗೋವಾ ವಿಮೋಚನಾ ಹೋರಾಟ ತೀವ್ರಗೊಂಡಿದ್ದ ಸಂದರ್ಭದಲ್ಲಿ ಪೆÇೀರ್ಚುಗೀಸರ ವಿರುದ್ಧ ಹೋರಾಡಲು ಕೋಝಿಕ್ಕೋಡ್ ಕೇಳಪ್ಪಾಜಿಯವರು ಉದ್ಘಾಟಿಸಿದ ಗೋವಾ ಸಮರ ಜಾಥಾದ ನೇತಾರರಾಗಿದ್ದವರು ಕೆ.ವಿ.ನಾರಾಯಣನ್. ಆಗಸ್ಟ್ 15 ರಂದು ಗೋವಾ ಗಡಿಯಲ್ಲಿರುವ ಸೂರ್ಲಿ ಗ್ರಾಮವನ್ನು ಪ್ರವೇಶಿಸಿದ್ದರು. ಮೆರವಣಿಗೆಯ ನಂತರ ಪೆÇೀರ್ಚುಗೀಸ್ ಸೈನ್ಯದ ಗುಂಡಿನ ದಾಳಿ ಮತ್ತು ಲಾಠಿಚಾರ್ಜ್ ನಡೆಯಿತು. ಸ್ವಯಂಸೇವಕರನ್ನು ಕ್ರೂರವಾಗಿ ಥಳಿಸಲಾಯಿತು ಮತ್ತು ಗಡಿಯುದ್ದಕ್ಕೂ ತಳ್ಳಲಾಯಿತು. 95ರ ಹರೆಯದ ಕೆ.ವಿ.ನಾರಾಯಣನ್ ಅವರು ಇಂದಿಗೂ ಸಮಾಜಸೇವೆ ಮತ್ತು ಸಹಕಾರ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.
ಕ್ಯಾಪ್ಟನ್ ಕೆ.ಎಂ.ಕುಂಞÂ್ಞ ಕಣ್ಣನ್ ನಂಬಿಯಾರ್:
ಕೆ.ಎಂ.ಕುಂಞÂ್ಞ ಕಣ್ಣನ್ ನಂಬಿಯಾರ್ ಅವರು ಕಾಞಂಗಾಡಿನಲ್ಲಿ ಕೆಲವು ಕಾರ್ಯಕರ್ತರೊಂದಿಗೆ ಸೇರಿ ಗೋವಾದಲ್ಲಿ ಧರಣಿ ನಡೆಸಿದರು. ಅವರು ಆಗಸ್ಟ್ 15, 1995 ರಂದು ಗೋವಾಕ್ಕೆ ಆಗಮಿಸಿದರು ಮತ್ತು ಕಾಶ್ಮೀರದಿಂದ ಗೋರಾಸಿಂಗ್ ನೇತೃತ್ವದ ನಿಯೋಗವು ಅವರನ್ನು ಬರಮಾಡಿಕೊಂಡಿತು. ರಾಷ್ಟ್ರಧ್ವಜ ಮತ್ತು ಘೋಷಣೆಗಳ ಫಲಕಗಳನ್ನು ಹಿಡಿದುಕೊಂಡಿದ್ದ ಪ್ರತಿಭಟನಾಕಾರರನ್ನು ಮಫ್ತಿಯಲ್ಲಿದ್ದ ಸೈನಿಕರು ಥಳಿಸಿದರು. ತುರ್ತು ಸಂದರ್ಭ ದೋಣಿ ಹತ್ತಿ ಭಾರತದ ಗಡಿಗೆ ಹೊರಟರು. ಅಖಂಡ ಕೇರಳದ ಆಂದೋಲನದಲ್ಲೂ ಪಾಲ್ಗೊಂಡಿದ್ದಾರೆ. ಸೈನ್ಯಕ್ಕೆ ಸೇರಿದ ನಂಬಿಯಾರ್ ಅವರು ಜೂನಿಯರ್ ಕಮಿಷನರ್ ಅಧಿಕಾರಿಯಾಗಿ ನಿವೃತ್ತರಾದರು. ಕ್ಯಾಪ್ಟನ್ ಕೆಎಂಕೆ ನಂಬಿಯಾರ್ ಅವರು ನಿವೃತ್ತ ಯೋಧರ ಸೇವೆ ಮತ್ತು ಸಮುದಾಯ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ.
-