ಕುಂಬಳೆ: ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ವಾರ್ಷಿಕ ಮಹೋತ್ಸವ ಫೆ. 26ರಂದು ಜರುಗಲಿದೆ. ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ. ಬೆಳಗ್ಗೆ 8ಕ್ಕೆ ಗಣಪತಿ ಹವನ, ವೇದಪಾರಾಯಣ, ಬಿಂಬಶುದ್ಧಿ, ಪಂಚವಿಂಶತಿ ಕಲಶಾಭಿಷೇಕ, ಕೆ.ವಿ ರಾಜನ್ ಮಾರಾರ್ ಪಯ್ಯನ್ನೂರ್ ಅವರಿಂದ ಸೋಪಾನ ಸಂಗೀತ, 10ಗಂಟೆಗೆ ಸಾಂಸ್ಕøತಿಕ ಸಮಾರಂಭ, ತುಲಾಭಾರ ಸೇವೆ ನಡೆಯುವುದು.
ಸಂಜೆ 6.40ಕ್ಕೆ ದೀಪಾರಾಧನೆ, 7ರಿಂದ ಸಾಂಸ್ಕøತಿಕ ವಐವಿಧ್ಯ, ರಾತ್ರಿ ಪೂಜೆ, ರಾತ್ರಿ 10ರಿಂದ ಶ್ರೀಭೂತಬಲಿ, ಬೆಡಿಕಟ್ಟೆ ಪೂಜೆ ನಡೆಯುವುದು.