ಕಾಸರಗೋಡು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕರ್ನಾಟಕ ರಾಜ್ಯ ಮತ್ತು ಕಾಸರಗೋಡು ಜಿಲ್ಲಾ ಘಟಕ ಪದಾಧಿಕಾರಿಗಳ ಆಯ್ಕೆಗೆ ಮತದಾನ ಫೆ.27 ರಂದು ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಫೆ.14 ಕೊನೇ ದಿನವಾಗಿದೆ ಎಂದು ಕಾಸರಗೋಡು ಜಿಲ್ಲಾ ಚುನಾವಣಾಧಿಕಾರಿ ವಾಮನ ರಾವ್ ಬೇಕಲ್ ಅವರು ತಿಳಿಸಿದ್ದಾರೆ.
ನುಳ್ಳಿಪ್ಪಾಡಿಯ ಕನ್ನಡ ಭವನವನ್ನು ಪತ್ರಿಕಾ ಭವನ ಚುನಾವಣಾಧಿಕಾರಿ ಕಚೇರಿಯಾಗಿದ್ದು ಸೋಮವಾರ ಅರ್ಹ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ನಾಮಪತ್ರ ಪರಿಶೀಲನೆ ಹಾಗು ಕ್ರಮಬದ್ಧ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ ಫೆ.16 ರಂದು ಆಗಲಿದ್ದು, ಫೆ.19 ರಂದು ಅರ್ಹರ ಪಟ್ಟಿ ಪ್ರಕಟಿಸಲಾಗುವುದು. ಫೆ.27 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರ ವರೆಗೆ ಮತದಾನ, ನಂತರ ಮತ ಎಣಿಕೆ ನಡೆಯಲಿದೆ. ಫೆ.28 ರಂದು ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಜಿಲ್ಲಾ ಘಟಕದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ(ಮೂರು), ಪ್ರಧಾನ ಕಾರ್ಯದರ್ಶಿ (ಒಂದು), ಕಾರ್ಯದರ್ಶಿ (ಮೂರು), ಖಜಾಂಜಿ(ಒಂದು), 15 ಕಾರ್ಯಕಾರಿಣಿ ಸದಸ್ಯರು, ರಾಜ್ಯ ಕಾರ್ಯಕಾರಿಣಿ ಸದಸ್ಯತ್ವ ಮತ್ತು ರಾಜ್ಯ ಘಟಕದ ಪದಾಧಿಕಾರಿಗಳ ಸ್ಥಾನಕ್ಕೆ ಏಕಕಾಲಕ್ಕೆ ಮತದಾನ ನಡೆಯಲಿದೆ ಎಂದು ವಾಮನ್ ರಾವ್ ಬೇಕಲ್ ತಿಳಿಸಿರುವರು.