HEALTH TIPS

ಮಾ.2ರಿಂದ ಆದೂರು ಶ್ರೀ ಭಗವತೀ ಕ್ಷೇತ್ರದಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

           ಮುಳ್ಳೇರಿಯ: ಆದೂರು ಶ್ರೀ ಭಗವತೀ ಕ್ಷೇತ್ರದಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮಾ.2ರಿಂದ 4ರ ತನಕ ನಾನಾ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

 ಮಾ.2ರಂದು ಸಂಜೆ 3ಕ್ಕೆ ಆದೂರು ಮಲ್ಲಾವರ ಶ್ರೀ ಪಂಚಲಿಂಗೇಶ್ವರ ಕ್ಷೇತ್ರದಿಂದ ಹೊರೆಕಾಣಿಕೆ ಮೆರವಣಿಗೆ, 5ಕ್ಕೆ ಕ್ಷೇತ್ರ ತಂತ್ರಿಗಳಿಗೆ ಸ್ವಾಗತ, 6ರಿಂದ ವೈಧಿಕ ಕಾರ್ಯಕ್ರಮಗಳು, 6.30ಕ್ಕೆ ದೀಪಾರಾಧನೆ, ಭಜನೆ, ರಾತ್ರಿ 8ಗಂಟೆಗೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

           ಮಾ.3ರಂದು ಮುಂಜಾನೆ 5ರಿಂದ ವೈಧಿಕ ಕಾರ್ಯಕ್ರಮಗಳು, ನಾನಾ ಭಜನಾ ಸಂಘಗಳಿಂದ ಭಜನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, 1ರಿಂದ 5ಗಂಟೆಯ ತನಕ ಭಜನೆ, ಸಂಜೆ 5.30ಕ್ಕೆ ಎಡನೀರು ಮಠದ ಶ್ರೀಶ್ರೀ ಸಚ್ಚಿದಾನಂದ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ, ದೀಪಾರಾಧನೆ, 6.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಪೆರುಂಕಳಿಯಾಟ ಮಹೋತ್ಸವ ಸಮಿತಿ ಅಧ್ಯಕ್ಷ ಬಿಪಿನ್‍ದಾಸ್ ರೈ ಅಧ್ಯಕ್ಷತೆ ವಹಿಸುವರು, ಶ್ರೀಶ್ರೀ ಸಚ್ಚಿದಾನಂದ ಸ್ವಾಮೀಜಿ ಉದ್ಘಾಟಿಸಿ ಮತ್ತು ಆಶೀರ್ವಚನ ನೀಡುವರು. ಬ್ರಹ್ಮಶ್ರೀ ವಾಸುದೇವ ತಂತ್ರಿ ಉಪಸ್ಥಿತರಿರುವರು. ಬ್ರಹ್ಮಶ್ರೀ ಪೆರಿಗಮನ ಶ್ರೀಧರನ್ ನಂಬೂದಿರಿ ಧಾರ್ಮಿಕ ಭಾಷಣ ಮಾಡುವರು, ಕಾರಡ್ಕ ಪಂಚಾಯಿತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ, ಉಪಾಧ್ಯಕ್ಷೆ ಜನನಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಮುಹಮ್ಮದ್ ನಾಸರ್, ರತ್ನಾಕರ, ಸದಸ್ಯರಾದ ವೇಣುಗೋಪಾಲ, ಅಬ್ದುಲ್ ರಹಿಮಾನ್ ಹಾಜಿ, ಮಲ್ಲಾವರ ಶ್ರೀ ಪಂಚಲಿಂಗೇಶ್ವರ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಕೃಷ್ಣಯ್ಯ ಬಲ್ಲಾಳ್, ಕಾಸರಗೋಡು ಶ್ರೀ ವೆಂಕಟ್ರಮಣ ಕ್ಷೇತ್ರ ಸಮಿತಿ ಅಧ್ಯಕ್ಷ ವೆಂಕಟ್ರಮಣ ಹೊಳ್ಳ, ಮೋರಾಯಿ ಶ್ರೀ ಭಗವತೀ ಕ್ಷೇತ್ರ ಸಮಿತಿ ಅಧ್ಯಕ್ಷ ನಾರಾಯಣ ಕಾವುಗೋಳಿ, ಕಾರ್ಲೆ ಗುತ್ಯಮ್ಮ ಭಗವತೀ ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಮೇಶ ಕಾವುಗೋಳಿ, ಪೆರುಂಕಳಿಯಾಟ ಮಹಿಳಾ ಸಮಿತಿ ಅಧ್ಯಕ್ಷೆ ಅನಸೂಯ ರೈ, ಕಾನಕ್ಕೋಡು ದೊಡ್ಡಮನೆ ತರವಾಡು ಮುಖ್ಯಸ್ಥ ಎ.ಕೆ.ಸದಾಶಿವ, ಭಗವತೀ ಕ್ಷೇತ್ರ ಸಮಿತಿ ಅಧ್ಯಕ್ಷ ದಾಮೋದರ ಕಾವುಗೋಳಿ, ಪೆರುಂಕಳಿಯಾಟ ಸಮಿತಿ ಪ್ರಧಾನ ಸಂಚಾಲಕ ಹರಿಶ್ಚಂದ್ರ.ಆರ್.ಬೇರಿಕೆ, ಭಗವತೀ ಕ್ಷೇತ್ರ ಕಾರ್ಯದರ್ಶಿ ಮಾಧವನ್.ಕೆ ಭಂಡಾರಮನೆ ಭಾಗವಹಿಸುವರು. ಈ ಸಂದರ್ಭದಲ್ಲಿ ನಾನಾ ಕ್ಷೇತ್ರಗಳಲ್ಲಿ ಸಾಧನೆ ಗೈದವರಿಗೆ ಸನ್ಮಾನ, ರಾತ್ರಿ ಗಂಟೆಗೆ ಬಪ್ಪನಾಡು ಮೇಳದವರಿಂದ ಶ್ರೀದೇವೀ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ. ಮಾ. 4ರಂದು ಪ್ರಾತಃಕಾಲ 5ಕ್ಕೆ ಗಣಪತಿಹೋಮ, 6.47ರಿಂದ 7.24ರ ಮಧ್ಯೆ ಶ್ರೀ ಭಗವತೀ ಅಮ್ಮ, ಪರಿವಾರ ದೈವಗಳ ಪುನಃ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಮತ್ತು ನಾಗಪ್ರತಿಷ್ಠೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries