HEALTH TIPS

ಕೋವಿಡ್ 3ನೇ ಅಲೆಯ ಉತ್ತುಂಗ ಅಂತ್ಯ - ಪಾಸಿಟಿವಿಟಿ ಇಳಿಕೆ : ಆರೋಗ್ಯ ಸಚಿವಾಲಯ

            ನವದೆಹಲಿ: ಕೋವಿಡ್​ ಸಾಂಕ್ರಾಮಿಕತೆಯ ದೈನಿಕ ಪ್ರಕರಣದಲ್ಲಿ ಇಳಿಮುಖವಾಗುತ್ತಿದ್ದು ಇದು ಸೋಂಕಿನ ಮೂರನೇ ಅಲೆಯ ಉತ್ತುಂಗದ ಅಂತ್ಯದ ಸೂಚನೆ ಎಂದು ಸರ್ಕಾರ ಗುರುವಾರ ಅಭಿಪ್ರಾಯಪಟ್ಟಿದೆ. ಕಳೆದ ವರ್ಷ ಕಾಡಿದ ಎರಡನೇ ಅಲೆಯ ಉತ್ತುಂಗದ ಸಮಯದಲ್ಲಿ ದೈನಿಕ ಕೇಸ್​ ಸಂಖ್ಯೆ ನಾಲ್ಕು ಲಕ್ಷವನ್ನೂ ದಾಟಿತ್ತು.

               ಲಾಂತರ ಜನರು ಬಲಿಯಾಗಿದ್ದರು. ಜನವರಿ 21ರಂದು 3,47,254 ಕೇಸ್​ಗಳು ದಾಖಲಾಗಿದ್ದು ಅದು ಮೂರನೇ ಅಲೆಯ ಉತ್ತುಂಗವಾಗಿತ್ತು. ಅಂದಿನಿಂದಲೂ ದೈನಿಕ ಪಾಸಿಟಿವ್​ ಪ್ರಮಾಣ ಕಡಿಮೆಯಾಗುತ್ತಲೇ ಬಂದಿದೆ.

1.72 ಲಕ್ಷ ಹೊಸ ಕೇಸ್​
            ಗುರುವಾರ ಭಾರತದಲ್ಲಿ ಸೋಂಕಿನ 1,72,433 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಭಾರತದ ಸೋಂಕಿತರ ಒಟ್ಟು ಸಂಖ್ಯೆ 4,18,03,318ಕ್ಕೆ ಏರಿದೆ. 1,008 ಜನರು ಈ ಅವಧಿಯಲ್ಲಿ ಮೃತಪಟ್ಟಿದ್ದು ಸಾವಿನ ಒಟ್ಟು ಸಂಖ್ಯೆ 4,98,983ಕ್ಕೆ ತಲುಪಿದೆ. ಬಹಳ ದಿನಗಳ ನಂತರ ಮರಣದ ದೈನಿಕ ಪ್ರಮಾಣ ನಾಲ್ಕಂಕಿ ದಾಟಿದೆ.

ವಸತಿ ರಹಿತರಿಗೆ ಲಸಿಕೆ
             ಯಾವುದೇ ಅಧಿಕೃತ ಗುರುತು ಪತ್ರಗಳಿಲ್ಲದ 77 ಲಕ್ಷ ವಸತಿ ರಹಿತರಿಗೆ ಕೋವಿಡ್​ ಲಸಿಕೆಯ ಮೊದಲ ಡೋಸ್​ ಹಾಗೂ 14.55 ಲಕ್ಷ ಜನರಿಗೆ ಎರಡೂ ಡೋಸ್​ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್​ಗೆ ತಿಳಿಸಿದೆ. ಆದರೆ, ಯಾವುದೇ ಗುರುತು ಪತ್ರ ಇಲ್ಲದ ಕೇವಲ 4.82 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆಯೆಂದು ಕೇಂದ್ರ ಸರ್ಕಾರ ಅಫಿಡವಿಟ್​ನಲ್ಲಿ ಹೇಳಿರುವುದನ್ನು ನ್ಯಾಯಮೂತಿರ್ಗಳಾದ ಡಿ.ವೈ. ಚಂದ್ರಚೂಡ್​, ಸೂರ್ಯ ಕಾಂತ್​ ಮತ್ತು ವಿಕ್ರಂ ನಾಥ್​ ನ್ಯಾಯ ಪೀಠ ಗಮನಕ್ಕೆ ತಂದಿತು.

                                   ಸಾವು ತಗ್ಗಿಸಲು ನೆರವಾಗದ ಲಾಕ್​ಡೌನ್​
            ಕೋವಿಡ್​-19 ಸಾಂಕ್ರಾಮಿಕತೆಯ ನಿಯಂತ್ರಣಕ್ಕೆ ಹೇರಲಾದ ಲಾಕ್​ಡೌನ್​ ಈ ವ್ಯಾಧಿಯಿಂದ ಸಂಭವಿಸಿದ ಸಾವಿನ ಪ್ರಮಾಣವನ್ನು ಇಳಿಸಲು ಗಮನಾರ್ಹ ಪರಿಣಾಮ ಬೀರಿಲ್ಲ ಎನ್ನುವುದು ಹೊಸ ಅಧ್ಯಯನವೊಂದರಿಂದ ತಿಳಿದು ಬಂದಿದೆ. ಲಾಕ್​ಡೌನ್​ನಿಂದಾಗಿ ಆಥಿರ್ಕ ಪರಿಸ್ಥಿತಿ ಹದಗೆಟ್ಟಿತು ಹಾಗೂ ಸಾಮಾಜಿಕ ಸಮಸ್ಯೆಗಳು ಸೃಷ್ಟಿಯಾದವು ಅಷ್ಟೇ ಎಂದು ಅಧ್ಯಯನ ಅಭಿಪ್ರಾಯಪಟ್ಟಿದೆ. 2020ರಲ್ಲಿ ಸಾಂಕ್ರಾಮಿಕತೆಯ ಆರಂಭ ಟ್ಟದಲ್ಲಿ ಹೇರಲಾದ ಲಾಕ್​ಡೌನ್​ನಿಂದ ಸಾವಿನ ಪ್ರಮಾಣವನ್ನು ಶೇಕಡ 0.2ರಷ್ಟನ್ನು ಮಾತ್ರ ತಗ್ಗಿಸಲು ಸಾಧ್ಯವಾಗಿತ್ತು ಎಂದು ಸಂಶೋಧಕರು ತೋರಿಸಿಕೊಟ್ಟಿದ್ದಾರೆ. ಅಮೆರಿಕ ಮತ್ತು ಯುರೋಪ್​ನಲ್ಲಿ ಸಾವಿನ ಪ್ರಮಾಣದ ಮೇಲೆ ಲಾಕ್​ಡೌನ್​ ಬೀರಿದ ಪರಿಣಾಮ ತೀರಾ ಕಡಿಮೆ ಅಥವಾ ನಗಣ್ಯವೇ ಆಗಿತ್ತು ಎಂದವರು ಹೇಳಿದ್ದಾರೆ.

                                    ಕೋವಿಡ್​ ಪತ್ತೆಗೆ ಹೊಸ ಸಾಧನ
              ಉಸಿರಾಟ ವಿಶ್ಲೇಷಣೆ ಆಧಾರದಲ್ಲಿ ಕರೊನಾ ಸೋಂಕಿರುವುದನ್ನು ಕೇವಲ ಐದು ನಿಮಿಷದಲ್ಲಿ ಪತ್ತೆ ಮಾಡಬಹುದಾದ ಸಾಧನವೊಂದನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಸಮ್ಮೇಳನ, ವಿವಾಹ ಸಮಾರಂಭ ಮುಂತಾದ ಜನರು ದೊಡ್ಡ ಸಂಖ್ಯೆಯಲ್ಲಿ ಸೇರುವ ಕಡೆಗಳಲ್ಲಿ ಸಾಮೂಹಿಕವಾಗಿ ಪರೀೆ ನಡೆಸಲು ಕೈಯಿಂದಲೇ ಹಿಡಿದು ನಿರ್ವಹಿಸಬಲ್ಲ ಈ ಸಾಧನ ನೆರವಾಗುತ್ತದೆ ಎಂದು ಎಸಿಎಸ್​ ನ್ಯಾನೊ ರ್ಜನಲ್​ನಲ್ಲಿ ಪ್ರಕಟವಾಗಿರುವ ವರದಿ ಹೇಳಿದೆ. ಈ ಸಾಧನವು ದೇಹದೊಳಗೆ ಯಾವುದೇ ಉಪಕರಣ ತೂರಿಸದೆ ಸೋಂಕು ಪತ್ತೆ ಮಾಡುವ ಸಾಮರ್ಥ್ಯ ಹೊಂದಿದೆ.

                                   ಲಸಿಕೆ ವಂಚನೆ ವರದಿ ಆಧಾರರಹಿತ
           ಲಸಿಕೆ ಲಾನುಭವಿಗಳು ಎರಡೂ ಡೋಸ್​ ಲಸಿಕೆ ಪಡೆಯದೆಯೇ ಅವರು ಸಂಪೂರ್ಣ ಡೋಸ್​ ಪಡೆದಿದ್ದಾರೆ ಎಂದು ನೋಂದಾಯಿಸಲಾಗುತ್ತಿದೆ ಎಂಬ ವರದಿಗಳು ಆಧಾರ ರಹಿತ ಹಾಗೂ ದಾರಿ ತಪ್ಪಿಸುವಂಥದ್ದೆಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಸ್ಪಷ್ಟಪಡಿಸಿದೆ. 'ಲಸಿಕೆ ವಂಚನೆ' ಬಗ್ಗೆ ಕೆಲವು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಸರ್ಕಾರ ಉಲ್ಲೇಖಿಸಿ ಈ ವಿವರಣೆ ನೀಡಿದೆ. ಲಸಿಕೆ ಅಭಿಯಾನದ ದತ್ತಾಂಶಗಳನ್ನು ಆರೋಗ್ಯ ಕಾರ್ಯಕರ್ತರೇ ಕೋವಿನ್​ ವ್ಯವಸ್ಥೆಯಲ್ಲಿ ನಮೂದಿಸುತ್ತಾರೆನ್ನುವ ಪರಿಜ್ಞಾನವೂ ವರದಿಗಾರರಿಗೆ ಇದ್ದಂತಿಲ್ಲ ಎಂದು ಸಚಿವಾಲಯ ಹೇಳಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries