ಎರ್ನಾಕುಳಂ: ಪೊನ್ನುರುನ್ನಿ ಎಂಬಲ್ಲಿ ರೈಲು ಗಾಡಿಯನ್ನು ಹಳಿತಪ್ಪಿಸುವ ಯತ್ನ ನಡೆದಿದೆ. ಇದಕ್ಕಾಗಿ ರೈಲ್ವೆ ಹಳಿ ಮೇಲೆ ಕಾಂಕ್ರೀಟ್ ಕಲ್ಲು ಪತ್ತೆಯಾಗಿದೆ. ಬೆಳಗಿನ ಜಾವ 2.30ರ ಸುಮಾರಿಗೆ ಈ ಘಟನೆ ನಡೆದಿದೆ.
ಕೊಚ್ಚಿಯ ರಿಫೈನರಿಯಿಂದ ಇಂಧನ ತುಂಬಿಸಿಕೊಂಡು ಸರಕು ಸಾಗಣೆ ರೈಲು ಸಾಗುತ್ತಿದ್ದಾಗ ಕಲ್ಲು ಕಾಣಿಸಿಕೊಂಡಿದೆ. ರೈಲು ಸಾಗುತ್ತಿದ್ದಾಗ ಹಳಿಯಿಂದ ಕಲ್ಲು ಬಿದ್ದಿದೆ. ಇದು ಲೋಕೋ ಪೈಲಟ್‌ನ ಗಮನ ಸೆಳೆಯಿತು. ಸರಕು ಸಾಗಣೆ ರೈಲು ಕಡಿಮೆ ವೇಗದಲ್ಲಿ ಟ್ರ್ಯಾಕ್ ಮೂಲಕ ಹಾದುಹೋಯಿತು. ಹಾಗಾಗಿ ಅನಾಹುತ ತಪ್ಪಿದೆ.
ಲೋಕೋ ಪೈಲಟ್ ಮಾಹಿತಿ ನೀಡಿದ ನಂತರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಟ್ರ್ಯಾಕ್‌ನಿಂದ 30 ಕೆಜಿ ಕಾಂಕ್ರೀಟ್ ಕಲ್ಲು ಪತ್ತೆಯಾಗಿದೆ. ಪೊಲೀಸ್ ತಂಡದೊಂದಿಗೆ ಗಮಿಸಿದ ಶ್ವಾನ ಆ ಪ್ರದೇಶದಲ್ಲಿದ್ದ ಖಾಲಿ ಮನೆಯೊಂದರ ಬಳಿ ಗುರುತು ನೀಡಿದೆ. ಸ್ಥಳೀಯರ ಪ್ರಕಾರ, ಮಾದಕ ವ್ಯಸನಿಗಳ ಗುಂಪು ಇಲ್ಲಿಗೆ ನಿಯಮಿತವಾಗಿ ಭೇಟಿ ನೀಡುತ್ತದೆ. ಇವರೇ ಕಲ್ಲಿರಿಸಿ ಹಳಿಯಲ್ಲಿ ಅಪಘಾತ ನಡೆಸಲು ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ.