ತಿರುವನಂತಪುರ: ರಾಜ್ಯದಲ್ಲಿ ಇಂದು 3262 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ತಿರುವನಂತಪುರ 638, ಎರ್ನಾಕುಳಂ 552, ಕೊಟ್ಟಾಯಂ 314, ಕೊಲ್ಲಂ 268, ತ್ರಿಶೂರ್ 235, ಕೋಝಿಕ್ಕೋಡ್ 232, ಇಡುಕ್ಕಿ 161, ಪತ್ತನಂತಿಟ್ಟ 159, ಆಲಪ್ಪುಳ 155, ಮಲಪ್ಪುರಂ 128, ಪಾಲಕ್ಕಾಡ್ 127, ಕಣ್ಣೂರು 122, ವಯನಾಡ್ 108, ಕಾಸರಗೋಡು 63 ಎಂಬಂತೆ ಕೋವಿಡ್ ದೃಢಪಡಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 41,753 ಮಾದರಿಗಳನ್ನು ಪರೀಕ್ಷಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,11,564 ಮಂದಿ ಜನರು ನಿಗಾದಲ್ಲಿದ್ದಾರೆ. ಇವರಲ್ಲಿ 1,09,157 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದಾರೆ ಮತ್ತು 2407 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ. ಒಟ್ಟು 305 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ 32,980 ಕೊರೋನಾ ಪ್ರಕರಣಗಳಲ್ಲಿ, 7.2 ಪ್ರತಿಶತ ಜನರು ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ 9 ಮಂದಿ ಮೃತರಾಗಿದ್ದಾರೆ. ಇದಲ್ಲದೆ, ಹಿಂದಿನ ದಿನಗಳಲ್ಲಿ ದಾಖಲೆಗಳನ್ನು ತಡವಾಗಿ ಸ್ವೀಕರಿಸಿದ ಕಾರಣ 56 ಸಾವುಗಳು ಮತ್ತು ಸುಪ್ರೀಂ ಕೋರ್ಟ್ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ್ದರಿಂದ 116 ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 65,161ಕ್ಕೆ ಏರಿಕೆಯಾಗಿದೆ. ಇಂದು ಸೋಂಕು ಪತ್ತೆಯಾದವರಲ್ಲಿ 17 ಮಂದಿ ಹೊರ ರಾಜ್ಯದವರು. 3065 ಮಂದಿ ಜನರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. ಈ ಪ್ಯೆಕಿ 148 ಮಂದಿಯ ಸಂಪರ್ಕದ ಮೂಲ ಸ್ಪಷ್ಟವಾಗಿಲ್ಲ. ಇಂದು ಮೂವತ್ತೆರಡು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಡಿಸಲಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 7339 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 685, ಕೊಲ್ಲಂ 219, ಪತ್ತನಂತಿಟ್ಟ 318, ಆಲಪ್ಪುಳ 479, ಕೊಟ್ಟಾಯಂ 790, ಇಡುಕ್ಕಿ 710, ಎರ್ನಾಕುಳಂ 1486, ತ್ರಿಶೂರ್ 714, ಪಾಲಕ್ಕಾಡ್ 351, ಮಲಪ್ಪುರಂ 448, ಕೋಝಿಕ್ಕೋಡ್ 624, ವಯನಾಡ್ 330, ಕಣ್ಣೂರು 70, ಕಾಸರಗೋಡು 115 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 32,980 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 63,95,737 ಮಂದಿ ಕೊರೊನಾದಿಂದ ಮುಕ್ತರಾಗಿದ್ದಾರೆ.