ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತು ಹಾಗೂ ಕುಟುಂಬ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ನಡೆದ ಪಲ್ಸ್ ಪೋಲೀಯೋ ಲಸಿಕೆ ವಿತರಣೆಯು 33ಕೇಂದ್ರಗಳಲ್ಲಿ ನಡೆಯಿತು
ಪಂಚಾಯತಿನ 17 ವಾರ್ಡ್ ಗಳಲ್ಲಿ ಒಟ್ಟು 31 ಹಾಗೂ ಪೆರ್ಲ ಬಸ್ ನಿಲ್ದಾಣ ,ಸೇರಾಜೆ ಅಂಗನವಾಡಿಯಲ್ಲಿ ಎರಡು ಪ್ರತ್ಯೇಕ ಮೊಬೈಲ್ ಬೂತ್ ಸಹಿತ 33 ಕೇಂದ್ರಗಳಲ್ಲಿ ಲಸಿಕೆ ವಿತರಿಸಲಾಗಿತ್ತು.
ಪಂಚಾಯತು ಮಟ್ಟದ ಪಲ್ಸ್ ಪೆÇೀಲಿಯೋ ಇಮ್ಯೂನೈಶೇಷನ್ ಕಾರ್ಯಕ್ರಮವನ್ನು ಪೆರ್ಲ ಕುಟುಂಬ ಆರೋಗ್ಯ ಕೇಂದ್ರ (ಈಊಅ)ದಲ್ಲಿ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಉದ್ಘಾಟಿಸಿದರು. ಪ್ರತಿ ವಾರ್ಡ್ ಮಟ್ಟದಲ್ಲಿ ಆಯಾಯ ವಾರ್ಡ್ ಸದಸ್ಯರು ಲಸಿಕೆ ವಿತರಣೆಗೆ ಚಾಲನೆ ನೀಡಿದರು. ಆರೋಗ್ಯ ಅಧಿಕಾರಿಗಳು, ಆರೋಗ್ಯ ಇಲಾಖಾ ಸಿಬ್ಬಂದಿಗಳು,ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು ಹಾಗೂ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ವಿವಿದೆಡೆ ಪೆÇೀಲಿಯೋ ವಿತರಣೆಗೆ ನೇತೃತ್ವ ನೀಡಿದ್ದರು.