ಕಾಸರಗೋಡು: ಜಿಲ್ಲೆಯಲ್ಲಿ ವಇದ್ಯುತ್ ಸಂಪರ್ಕ ಪಡೆಯಲು 335ಮಂದಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದು, ವಿದ್ಯುತ್ ಕಂಬಗಳ ಕೊರತೆಯಿಂದ ಸಂಪರ್ಕ ವಿಳಂಬವಾಗಿರುವುದಾಗಿ ಇಂಧನ ಖಾತೆ ಸಚಿವ ಕೆ. ಕೃಷ್ಣನ್ ಕುಟ್ಟಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಅವರು ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು ಅವರ ಪ್ರಶ್ನೆಗಳಿಗೆ ಉತ್ತರಿಸಿ ಈ ಮಾಃಇತಿ ನೀಡಿದ್ದಾರೆ.
ಅರ್ಜಿ ಸಲ್ಲಿಸಿದವರಿಗೆಲ್ಲರಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ತಕ್ಷಣಕ್ಕೆ 703 ವಿದ್ಯುತ್ ಕಂಬಗಳ ಅಗತ್ಯವಿದ್ದು, ಕಂಬ ಲಭ್ಯತೆ ವಿಷಯದಲ್ಲಿ ನ್ಯಾಯಾಲಯ ಪ್ರಕ್ರಿಯೆ ಜಾರಿಯಲ್ಲಿರುವುದರಿಂದ ಸಮಸ್ಯೆ ಉಂಟಾಗಿದೆ. ಕಾಸರಗೋಡು ಸೆಕ್ಷನ್‍ನಲ್ಲಿ 8, ನೆಲ್ಲಿಕುಂಜೆ ಸೆಕ್ಷನ್‍ನ ಸೀತಾಂಗೋಳಿಯಲ್ಲಿ 21, ಉಪ್ಪಳದಲ್ಲಿ 10, ಮಂಜೇಶ್ವರ 8, ವರ್ಕಾಡಿ 34, ಚೆರ್ಕಳ 24, ಬದಿಯಡ್ಕ 38, ಪೆರ್ಲ 7, ಮುಳ್ಳೇರಿಯ 16, ಉದುಮ8, ಕುತ್ತಿಕ್ಕೋಲ್ 10, ಚಟ್ಟಂಚಾಲ್ 4, ಬಳಾಂತೋಡು 4, ಚಿತ್ತಾರಿ 3, ರಾಜಾಪುರಂ 51, ತೃಕರಿಪುರ 2, ಚಾಯಂಗೋಡು 3, ಕಯ್ಯೂರ್ 7, ಮಾವುಂಗಾಲ್ 27, ನೀಲೇಶ್ವರ 9, ಪೆರಿಯಬಜಾರ್ 14, ಪಿಲಿಕೋಡ್ 17 ಅರ್ಜಿಗಳು ಸಲ್ಲಿಕೆಯಾಗಿದೆ.