HEALTH TIPS

ಇಳಿಕೆಯತ್ತ ಕೊರೊನಾ: ರಾಜ್ಯದಲ್ಲಿ ಇಂದು 33,538 ಮಂದಿಗೆ ಸೋಂಕು ಪತ್ತೆ:1,02,778 ಮಾದರಿಗಳ ಪರೀಕ್ಷೆ


       ತಿರುವನಂತಪುರ: ರಾಜ್ಯದಲ್ಲಿ ಇಂದು 33,538 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಎರ್ನಾಕುಳಂ 5577, ತಿರುವನಂತಪುರ 3912, ಕೊಟ್ಟಾಯಂ 3569, ಕೊಲ್ಲಂ 3321, ತ್ರಿಶೂರ್ 2729, ಕೋಝಿಕ್ಕೋಡ್ 2471, ಮಲಪ್ಪುರಂ 2086, ಆಲಪ್ಪುಳ 2023, ಪತ್ತನಂತಿಟ್ಟ 1833, ಕಣ್ಣೂರು 1807,ಪಾಲಕ್ಕಾಡ್ 1577, ಇಡುಕ್ಕಿ 1207, ವಯನಾಡ್ 923, ಕಾಸರಗೋಡು 503 ಎಂಬಂತೆ ಕೋವಿಡ್ ದೃಢಪಡಿಸಲಾಗಿದೆ.
        ಕಳೆದ 24 ಗಂಟೆಗಳಲ್ಲಿ 1,02,778 ಮಾದರಿಗಳನ್ನು ಪರೀಕ್ಷಿಸಲಾಗಿದೆ.  ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 5,18,481 ಮಂದಿ ಜನರು ನಿಗಾದಲ್ಲಿದ್ದಾರೆ.  ಇವರಲ್ಲಿ 5,08,205 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ ಮತ್ತು 10,276 ಮಂದಿ ಆಸ್ಪತ್ರೆಗಳಲ್ಲಿದ್ದಾರೆ.  ಒಟ್ಟು 1,061 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 
       ಪ್ರಸ್ತುತ, 3,52,399 ಕೋವಿಡ್ ಪ್ರಕರಣಗಳಲ್ಲಿ, ಕೇವಲ 3 ಶೇ.ಜನರು  ಆಸ್ಪತ್ರೆಗಳು / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
         ಕಳೆದ 24 ಗಂಟೆಗಳಲ್ಲಿ 22 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.  ಇದಲ್ಲದೆ, ಹಿಂದಿನ ದಿನಗಳಲ್ಲಿ ದಾಖಲೆಗಳನ್ನು ತಡವಾಗಿ ಸ್ವೀಕರಿಸಿದ ಕಾರಣ 225 ಸಾವುಗಳು ಮತ್ತು ಸುಪ್ರೀಂ ಕೋರ್ಟ್‌ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ್ದರಿಂದ 197 ಸಾವುಗಳು ವರದಿಯಾಗಿವೆ.  ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 57,740ಕ್ಕೆ ಏರಿಕೆಯಾಗಿದೆ.  
      ಇಂದು ಸೋಂಕು ಪತ್ತೆಯಾದವರಲ್ಲಿ 147 ಮಂದಿ ಹೊರ ರಾಜ್ಯದವರು.  ಸಂಪರ್ಕದ ಮೂಲಕ 32,500 ಮಂದಿ ಜನರು ಸೋಂಕಿಗೆ ಒಳಗಾಗಿದ್ದಾರೆ. 651 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ.  
 ‌‌‌‌‌      ಇಂದು  240 ಮಂದಿ  ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಡಿಸಲಾಗಿದೆ.                   ಸೋಂಕು ಬಾಧಿಸಿ ಚಿಕಿತ್ಸೆಯಲ್ಲಿರುವವರಲ್ಲಿ ಇಂದು 46,813 ಮಂದಿ ಜನರು ಗುಣಮುಖರಾಗಿದ್ದಾರೆ.  ತಿರುವನಂತಪುರ 5911, ಕೊಲ್ಲಂ 5613, ಪತ್ತನಂತಿಟ್ಟ 2968, ಆಲಪ್ಪುಳ 2287, ಕೊಟ್ಟಾಯಂ 996, ಇಡುಕ್ಕಿ 2235, ಎರ್ನಾಕುಳಂ 9135, ತ್ರಿಶೂರ್ 2704, ಪಾಲಕ್ಕಾಡ್ 3206, ಮಲಪ್ಪುರಂ 2927, ಕೋಝಿಕ್ಕೋಡ್ 4467, ವಯನಾಡ್ 1416, ಕಣ್ಣೂರು 2252, ಕಾಸರಗೋಡು 697 ಎಂಬಂತೆ ಗುಣಮುಖರಾಗಿದ್ದಾರೆ.
         ಇದರೊಂದಿಗೆ 3,52,399 ಮಂದಿಗೆ ಸೋಂಕು ದೃಢಪಟ್ಟಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.  ಇದುವರೆಗೆ 58,33,762 ಮಂದಿ ಕೊರೊನಾದಿಂದ ಮುಕ್ತರಾಗಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries