ತಿರುವನಂತಪುರ: ರಾಜ್ಯದಲ್ಲಿ ಇಂದು 3581 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಎರ್ನಾಕುಳಂ 637, ತಿರುವನಂತಪುರ 523, ಕೊಲ್ಲಂ 364, ಕೊಟ್ಟಾಯಂ 313, ಕೋಝಿಕ್ಕೋಡ್ 273, ತ್ರಿಶೂರ್ 228, ಆಲಪ್ಪುಳ 206, ಪತ್ತನಂತಿಟ್ಟ 186, ಮಲಪ್ಪುರಂ 176, ಪಾಲಕ್ಕಾಡ್ 121, ಇಡುಕ್ಕಿ 169, ಕಣ್ಣೂರು 158, ವಯನಾಡ್ 129, ಕಾಸರಗೋಡು 48 ಎಂಬಂತೆ ಸೋಂಕು ದೃಢಪಟ್ಟಿದೆ.
ಕಳೆದ 24 ಗಂಟೆಗಳಲ್ಲಿ 44,054 ಮಾದರಿಗಳನ್ನು ಪರೀಕ್ಷಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,18,975 ಮಂದಿ ಜನರು ನಿಗಾದಲ್ಲಿದ್ದಾರೆ. ಇವರಲ್ಲಿ 1,16,378 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದಾರೆ ಮತ್ತು 2,597 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ. ಒಟ್ಟು 353 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಸ್ತುತ 37,239 ಕೊರೋನಾ ಪ್ರಕರಣಗಳಲ್ಲಿ, ಕೇವಲ 7ಶೇ. ಜನರು ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಕೊರೋನಾ ಬಾಧಿಸಿ ಆರು ಮಂದಿ ಮೃತರಾಗಿದ್ದಾರೆ.ಹಿಂದಿನ ದಿನಗಳಲ್ಲಿ ದಾಖಲೆಗಳ ವಿಳಂಬದಿಂದ 43 ಸಾವುಗಳು ಮತ್ತು ಸುಪ್ರೀಂ ಕೋರ್ಟ್ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ್ದರಿಂದ 128 ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 64,980ಕ್ಕೆ ಏರಿಕೆಯಾಗಿದೆ.
ಇಂದು ಸೋಂಕಯ ಪತ್ತೆಯಾದವರಲ್ಲಿ 12 ಮಂದಿ ಹೊರ ರಾಜ್ಯದವರು. 3415 ಜನರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. 119 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮೂವತ್ತೈದು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಟ್ಟಿದೆ.
ಇಂದು 7837 ಮಂದಿ ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ತಿರುವನಂತಪುರ 978, ಕೊಲ್ಲಂ 425, ಪತ್ತಯನಂತಿಟ್ಟ 413, ಆಲಪ್ಪುಳ 503, ಕೊಟ್ಟಾಯಂ 820, ಇಡುಕ್ಕಿ 574, ಎರ್ನಾಕುಳಂ 1253, ತ್ರಿಶೂರ್ 672, ಪಾಲಕ್ಕಾಡ್ 325, ಮಲಪ್ಪುರಂ 415, ಕೋಝಿಕ್ಕೋಡ್ 721, ವಯನಾಡ್ 321, ಕಣ್ಣೂರು 282, ಕಾಸರಗೋಡು 135 ಎಂಬಂತೆ ಗುಣಮುಖರಾಗಿದ್ದಾರೆ.