ಯೂಟ್ಯೂಬ್ ಚಾನಲ್ ಹ್ಯಾಕರ್‌ಗಳ ದಾಳಿಗೆ ತುತ್ತಾಗಿರುವ ಬಗ್ಗೆ ಸಂಸದ ಟಿವಿ ಪ್ರಕಟಣೆಯಲ್ಲಿ ತಿಳಿಸಿದೆ.
'ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಯೂಟ್ಯೂಬ್ ಚಾನಲ್ ಹ್ಯಾಕ್ ಮಾಡಲಾಗಿದ್ದು, ನಮ್ಮ ಸಾಮಾಜಿಕ ಜಾಲತಾಣ ತಂಡವು ನಿರಂತರ ಪ್ರಯತ್ನ ನಡೆಸಿ ಬೆಳಗಿನ ಜಾವ 3.45ರ ಸುಮಾರಿಗೆ ಮರುಸ್ಥಾಪಿಸಲಾಗಿದೆ. ಭಾರತದಲ್ಲಿ ಸೈಬರ್ ಭದ್ರತೆ ಕುರಿತಾದ ಸಮಸ್ಯೆಗಳ ಬಗ್ಗೆ ಗಮನ ಹರಿಸುವ ಭಾರತೀಯ ಕಂಪ್ಯೂಟರ್ ತುರ್ತು ನಿರ್ವಹಣಾ ತಂಡವು ಹ್ಯಾಕಿಂಗ್ ಬಗ್ಗೆ ಸಂಸದ್ ಟಿವಿಗೆ ಮಾಹಿತಿ ನೀಡಿತ್ತು' ಎಂದು ಪ್ರಕಟಣೆ ತಿಳಿಸಿದೆ.
ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಕಾರಣ ಈ ಚಾನಲ್ ಅನ್ನು ರದ್ದುಪಡಿಸಲಾಗಿದೆ ಎಂಬ ಸಂದೇಶ ಸಂಸದ್ ಚಾನಲ್‌ನಲ್ಲಿ ಬರುತ್ತಿತ್ತು. ಸಾಮಾಜಿಕ ಜಾಲತಾಣದಲ್ಲೂ ಸ್ಕ್ರೀನ್ ಶಾಟ್‌ಗಳು ಹರಡಿದ್ದವು.