ನವದೆಹಲಿ: ಭಾರತದಲ್ಲಿ ಜೂನ್ 22ರ ಹೊತ್ತಿಗೆ ಕೋವಿಡ್‌ನ ನಾಲ್ಕನೇ ಅಲೆ ಆರಂಭವಾಗುವ ಸಾಧ್ಯತೆ ಇದೆ. ಇದು ಆಗಸ್ಟ್‌ನ ಮಧ್ಯ ಭಾಗದ ನಂತರ ಉತ್ತುಂಗದ ಮಟ್ಟ ತಲುಪಬಹುದು ಎಂದು ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಅಧ್ಯಯನವೊಂದು ಹೇಳಿದೆ.
ನವದೆಹಲಿ: ಭಾರತದಲ್ಲಿ ಜೂನ್ 22ರ ಹೊತ್ತಿಗೆ ಕೋವಿಡ್‌ನ ನಾಲ್ಕನೇ ಅಲೆ ಆರಂಭವಾಗುವ ಸಾಧ್ಯತೆ ಇದೆ. ಇದು ಆಗಸ್ಟ್‌ನ ಮಧ್ಯ ಭಾಗದ ನಂತರ ಉತ್ತುಂಗದ ಮಟ್ಟ ತಲುಪಬಹುದು ಎಂದು ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಅಧ್ಯಯನವೊಂದು ಹೇಳಿದೆ.
ಇನ್ನೂ ಪರಿಶೀಲನಾ ಹಂತದಲ್ಲಿರುವ ಅಧ್ಯಯನದ ವರದಿಯನ್ನು ಆನ್‌ಲೈನ್ ಜಾಲತಾಣ ಮೆಡ್‌ಆರ್‌ಕ್ಸಿವ್‌ನಲ್ಲಿ ಪ್ರಕಟಿಸಲಾಗಿದೆ. ಸಂಖ್ಯಾಶಾಸ್ತ್ರದ ಮಾದರಿ ಮೂಲಕ ಅಧ್ಯಯನ ನಡೆಸಲಾಗಿದೆ. ಹೊಸ ಕೋವಿಡ್ ಅಲೆಯು ನಾಲ್ಕು ತಿಂಗಳ ಕಾಲ ಇರುವ ಸಾಧ್ಯತೆ ಇದೆ ಎಂದು ಅಧ್ಯಯನ ಹೇಳಿದೆ.
ಐಐಟಿ ಕಾನ್ಪುರದ ಗಣಿತ ಮತ್ತು ಸಂಖ್ಯಾಶಾಸ್ತ್ರ ವಿಭಾಗದ ಸಬರ ಪರ್ಷದ್ ರಾಜೇಶಭಾಯ್, ಸುಭ್ರಾ ಶಂಕರ್ ಧರ್ ಮತ್ತು ಶಲಭ್ ಅಧ್ಯಯನದ ಭಾಗವಾಗಿದ್ದರು. ಸಂಭವನೀಯ ಹೊಸ ಕೋವಿಡ್‌ನ ರೂಪಾಂತರ ತಳಿಯ ಗುಣಲಕ್ಷಣಗಳು ಮತ್ತು ದೇಶದಾದ್ಯಂತ ಇರುವ ಲಸಿಕೆಯ ಪ್ರಮಾಣದ ಮೇಲೆ ನಾಲ್ಕನೇ ಅಲೆಯ ತೀವ್ರತೆಯು ಅವಲಂಬಿತವಾಗಿರುತ್ತದೆ ಎಂದು ಅಧ್ಯಯನ ಹೇಳಿದೆ.
'ಕೋವಿಡ್ ಪ್ರಾರಂಭವಾದ 2020ರ ಜನವರಿ 30 ರಿಂದ 936 ದಿನಗಳ ನಂತರ ಭಾರತದಲ್ಲಿ ನಾಲ್ಕನೇ ಅಲೆ ಕಾಣಿಸಿಕೊಳ್ಳಲಿದೆ. ಅಂದರೆ 2022ರ ಜೂನ್ 22 ರಂದು ಹೊಸ ಕೋವಿಡ್ ಅಲೆ ಆರಂಭವಾಗಿ ಆಗಸ್ಟ್ 23ರ ಹೊತ್ತಿಗೆ ಉತ್ತಂಗಕ್ಕೆ ತಲುಪಲಿದೆ. ಇದು ಅಕ್ಟೋಬರ್ 24 ರವರೆಗೆ ಮುಂದುವರೆಯಲಿದೆ' ಎಂದು ಅಧ್ಯಯನದ ಲೇಖಕರು ಸಂಶೋಧನಾ ವರದಿಯಲ್ಲಿ ಹೇಳಿದ್ದಾರೆ.