HEALTH TIPS

ಭಾರತದಲ್ಲಿ 42 ಭಯೋತ್ಪಾದಕ ಸಂಘಟನೆಗಳಿಗೆ ನಿಷೇಧ

           ನವದೆಹಲಿ: ಕೇಂದ್ರ ಸರ್ಕಾರದ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ 1967ರ ಅನುಸಾರ ದೇಶದಲ್ಲಿ 42 ಭಯೋತ್ಪಾದಕ ಸಂಘಟನೆಗಳನ್ನು ಗುರುತಿಸಲಾಗಿದ್ದು, 31 ಮಂದಿಯನ್ನು ವೈಯಕ್ತಿಕವಾಗಿ ಭಯೋತ್ಪಾದಕರು ಎಂದು ಘೋಷಿಸಿರುವುದಾಗಿ ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ನಿತ್ಯಾನಂದ ರಾಯ್ ತಿಳಿಸಿದ್ದಾರೆ.

          ರಾಜ್ಯಸಭೆಯಲ್ಲಿ ಸದಸ್ಯರಾದ ಎ.ವಿಜಯಕುಮಾರ್ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರ ನೀಡಿರುವ ಅವರು, ಭಯೋತ್ಪಾದಕ ಸಂಘಟನೆಗಳ ಜೊತೆ 13 ಕಾನೂನು ಬಾಹಿರ ಸಂಘಟನೆಗಳನ್ನು ಗುರಿತಿಸಿ ನಿಷೇಸಲಾಗಿದೆ ಎಂದು ಹೇಳಿದ್ದಾರೆ.

            ಗುರುತಿಸಲಾದ ವ್ಯಕ್ತಿಗಳು ಮತ್ತು ಸಂಘಟನೆಗಳ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಕಾರಿಗಳು ನಿಗಾ ವಹಿಸಿದ್ದಾರೆ. ಸದರಿ ಸಂಘಟನೆಗಳು ಬೇರೆ ಹೆಸರಿನಲ್ಲಿ ಮತ್ತೆ ಸಂಘಟನೆ ಮಾಡಲು ಅಥವಾ ತಮ್ಮ ಚಟುವಟಿಕೆಗಳನ್ನು ವಿಸ್ತರಣೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

          2019ರಲ್ಲಿ ಕಾನೂನಿಗೆ ತಿದ್ದುಪಡಿ ತಂದು ಭಯೋತ್ಪಾದಕರನ್ನು ಬಂಸುವ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಭಯೋತ್ಪಾದಕ ಸಂಘಟನೆಗಳ ನಾಯಕತ್ವ ಮತ್ತು ಮರುಸೇರ್ಪಡೆ ನಿಯಂತ್ರಣವಾಗಿದೆ ಎಂದು ತಿಳಿಸಿದ್ದಾರೆ. ಇದೇ ಸದಸ್ಯರ ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿರುವ ಸಚಿವ ನಿತ್ಯಾನಂದ ರಾಯ್ ಅವರು, ದೇಶದಲ್ಲಿ 16 ಸಾವಿರ ಖಾಸಗಿ ಭದ್ರತಾ ಏಜೆನ್ಸಿಗಳು ನೋಂದಣಿಯಾಗಿವೆ ಎಂದು ತಿಳಿಸಿದ್ದಾರೆ.

         ಖಾಸಗಿ ಭದ್ರತಾ ಏಜೆನ್ಸಿಗಳು 2005ರ ಕಾಯ್ದೆ ಅನುಸಾರ ನೋಂದಣಿ ಪಡೆದುಕೊಳ್ಳುತ್ತವೆ. ರಾಜ್ಯ ಸರ್ಕಾರಗಳೇ ಈ ಸಂಸ್ಥೆಗಳ ಮೇಲೆ ನಿಗಾ ವಹಿಸುತ್ತವೆ. ಕರ್ತವ್ಯ ನಿರ್ವಹಣೆ ಮಾರ್ಗಸೂಚಿಯೂ ರಾಜ್ಯಗಳ ಮಟ್ಟದಲ್ಲೇ ನಿರ್ಧಾರವಾಗುತ್ತದೆ ಎಂದು ಸ್ಪಷ್ಟ ಪಡಿಸಿದ್ದಾರೆ.

          2019ರಲ್ಲಿ ಕೇಂದ್ರ ಸರ್ಕಾರ ಖಾಸಗಿ ಭದ್ರತಾ ಸಿಬ್ಬಂದಿಗಳ ಪರವಾನಗಿ ವೆಬ್‍ಸೈಟ್ ಅನ್ನು ನಿರ್ವವಣೆ ಮಾಡುತ್ತಿದೆ. ಜನವರಿ 28ರವರೆಗೆ ದೇಶದಲ್ಲಿ 16,427 ಏಜೆನ್ಸಿಗಳು ಸೇವೆ ಒದಗಿಸುತ್ತಿವೆ. 18 ವರ್ಷ ಮೇಲ್ಪಟ್ಟವರನ್ನು ಭದ್ರತಾ ಸಿಬ್ಬಂದಿಗಳನ್ನಾಗಿ ನಿಯೋಜಿಸಿಕೊಳ್ಳಬಹುದು, ಗರಿಷ್ಠ ವಯೋಮಿತಿ 65 ವರ್ಷಗಳೆಂದು ನಿಗದಿ ಮಾಡಲಾಗಿದೆ. ಖಾಸಗಿ ಭದ್ರತಾ ಸಿಬ್ಬಂದಿಗಳಿಗೆ ವಿಶೇಷವಾದ ಸ್ಥಾನಮಾನಗಳೇನು ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

       ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಭದ್ರತಾ ಏಜೆನ್ಸಿಗಳು ನೋಂದಣಿಯಾಗಿವೆ. 2821 ಏಜೆನ್ಸಿಗಳು ಮಹರಾಷ್ಟ್ರದಲ್ಲಿದ್ದರೆ, ಗುಜರಾತ್‍ನಲ್ಲಿ 2203, ರಾಜಸ್ಥಾನದಲ್ಲಿ 1228, ಹರ್ಯಾಣದಲ್ಲಿ 1118, ಕರ್ನಾಟಕದಲ್ಲಿ 906 ಏಜೆನ್ಸಿಗಳು ನೋಂದಣಿಯಾಗಿವೆ ಎಂದು ಅವರು ತಿಳಿಸಿದ್ದಾರೆ.


          

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries