ನವದೆಹಲಿ: ಭಾರತದಿಂದ ವಿವಿಧ ದೇಶಗಳಿಗೆ ವಲಸೆ ಹೋಗಿರುವವರ ಪೈಕಿ ಇಲ್ಲಿಯವರೆಗೆ 4,335 ಜನರು ಕೋವಿಡ್-19ರಿಂದ ಮೃತಪಟ್ಟಿದ್ದಾರೆ. ಇವರಲ್ಲಿ ಸೌದಿ ಅರೇಬಿಯದಲ್ಲಿ ಅತ್ಯಧಿಕ ಅಂದರೆ 1,237 ಜನರು ಅಸುನೀಗಿದ್ದಾರೆ. ನಂತರದ ಸ್ಥಾನದಲ್ಲಿ ಯುಎಇ (894 ಸಾವು) ಇದೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಈ ಕುರಿತು ವಿದೇಶಾಂಗ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ವಿ.ಮುರಳೀಧರನ್ ರಾಜ್ಯಸಭೆಯಲ್ಲಿ ಗುರುವಾರ ಮಾಹಿತಿ ನೀಡಿದರು.
ಕುವೈತ್‌ನಲ್ಲಿ 668, ಒಮನ್‌ನಲ್ಲಿ 555, ಬಹ್ರೇನ್‌ನಲ್ಲಿ 203, ಮಲೇಷ್ಯಾದಲ್ಲಿ 186, ಕತಾರ್‌ನಲ್ಲಿ 113, ರಷ್ಯಾದಲ್ಲಿ 15, ಅಮೆರಿಕದಲ್ಲಿ ಐವರು ಭಾರತೀಯ ವಲಸಿಗರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಎಂದು ಅಂಕಿ ಅಂಶ ನೀಡಿದರು.
ವಿದೇಶಗಳಲ್ಲಿ ಮೃತಪಟ್ಟ ಭಾರತೀಯರಲ್ಲಿ 127 ಜನರ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆ ಸಲುವಾಗಿ ಭಾರತಕ್ಕೆ ತರಲಾಗಿತ್ತು ಎಂದು ತಿಳಿಸಿದರು.
ವಿದೇಶಿ ಜೈಲುಗಳಲ್ಲಿ 7925 ಭಾರತೀಯರು: ದೇಶದ 7,925 ಜನರು ಕೈದಿಗಳು, ವಿಚಾರಣಾಧೀನ ಕೈದಿಗಳಾಗಿ ವಿದೇಶಗಳ ಜೈಲುಗಳಲ್ಲಿದ್ದಾರೆ ಎಂದು ಸಚಿವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.
ಯುಎಇ ಜೈಲಿನಲ್ಲಿ ಅತ್ಯಧಿಕ ಅಂದರೆ 1,663 ಭಾರತೀಯರು ಇದ್ದಾರೆ. ಸೌದಿ ಅರೇಬಿಯದಲ್ಲಿ 1,363 ಹಾಗೂ ನೇಪಾಳದ ಜೈಲಿನಲ್ಲಿ 1,039 ಇದ್ದಾರೆ.
ಕೈದಿಗಳ ಹಸ್ತಾಂತರ ಕಾಯ್ದೆ-2003ರ ಅನ್ವಯರ 2006ರಿಂದ 2022ರವರೆಗೆ 75 ಭಾರತೀಯರೂ ಸೇರಿದಂತೆ 86 ಕೈದಿಗಳ ಹಸ್ತಾಂತರ ಆಗಿದೆ ಎಂದು ಅವರು ತಿಳಿಸಿದ್ದಾರೆ.