HEALTH TIPS

ದುಬೈನಲ್ಲಿ ರಾತ್ರೋರಾತ್ರಿ 44 ಕೋಟಿ ರೂಪಾಯಿ ಒಡತಿಯಾದ ಕೇರಳದ ಯುವತಿ!

             ದುಬೈ: ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಲಾಟರಿ ನಿಷೇಧಿಸಲಾಗಿದೆ. ಆದರೆ ಹಲವು ರಾಜ್ಯಗಳು ಮಾತ್ರವಲ್ಲದೇ ವಿದೇಶಗಳಲ್ಲಿಯೂ ಲಾಟರಿ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಅದೃಷ್ಟವಿದ್ದರೆ ಮಾಲಾಮಾಲ್‌ ಆಗುವವರು, ಇಲ್ಲದಿದ್ದರೆ ಬೀದಿಗೆ ಬದುವರು.

          ಒಟ್ಟಿನಲ್ಲಿ ಕೇರಳದ ಯುವತಿಯೊಬ್ಬರಿಗೆ ಬಂಪರ್‌ ಬಹುಮಾನ ದುಬೈನಲ್ಲಿ ಸಿಕ್ಕಿದೆ. ಲಾಟರಿ ಟಿಕೆಟ್‌ ಪಡೆದಿದ್ದ ಲೀನಾ ಜಲಾಲ್ 22 ಮಿಲಿಯನ್ ದಿರಂ ಅಂದರೆ ಸರಿಸುಮಾರು 44.75 ಕೋಟಿ ರೂಪಾಯಿಗಳನ್ನು ಗೆದ್ದಿದ್ದಾರೆ!

            ದುಬೈನಲ್ಲಿ ವಾಸಿಸತ್ತಿರುವ ಕೇರಳದ ಲೀನಾ ಜಲಾಲ್ ಅಬುದಾಬಿಯ ಬುಗ್ ಟಿಕೆಟ್‌ನ ಪ್ರತಿವಾರ ಡ್ರಾ ಮಾಡಲಾಗುವ ಟಿಕೆಟ್‌ನಲ್ಲಿ ಹಣ ಗೆದ್ದಿದ್ದಾರೆ. ಇವರು ಅಬುದಾಬಿಯಲ್ಲಿ ಕಂಪೆನಿಯೊಂದರಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮಗೆ ಬಂದಿರುವ ಹಣದಲ್ಲಿ ಹಲವು ಭಾಗವನ್ನು ಸಾಮಾಜಿಕ ಸೇವೆಗಾಗಿ ಮೀಸಲು ಇಡುವುದಾಗಿ ಲೀನಾ ಸ್ಥಳೀಯ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ವಿವರಿಸಿದ್ದಾರೆ.

 ‌           ಇವರಷ್ಟೇ ಅಲ್ಲದೇ, ಸೂರೈಫ್‌ ಸೂರು ಎಂಬ ಇನ್ನೊಬ್ಬ ಕೇರಳ ಮಲಪ್ಪುರಂನ ವ್ಯಕ್ತಿಗೆ 1 ಮಿಲಿಯನ್ ದಿರಂ ಮೊತ್ತ ಸಿಕ್ಕಿದೆ. ಇವರು ತಾವು ಗಳಿಸಿರುವ ಹಣದಲ್ಲಿ ಸ್ವಲ್ಪ ಹಣವನ್ನು ಪಾಲಕರಿಗೆ ನೀಡುತ್ತೇನೆ. ಉಳಿದಂತೆ ನನ್ನ ಪತ್ನಿ ಹಾಗೂ ಮಗಳ ಭವಿಷ್ಯದ ಭದ್ರತೆಗೆ ಹಣವನ್ನು ಬಳಸುತ್ತೇನೆ ಎಂದಿದ್ದಾರೆ.

           ಕಳೆದ ವರ್ಷ ದುಬೈನಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಕೇರಳದ ವ್ಯಕ್ತಿಗೆ 40 ಕೋಟಿ ರೂಪಾಯಿ ಲಾಟರಿ ಹೊಡೆದಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries