ಜಿನೀವಾ: ಹೆಚ್ಚು ಹಾವಳಿ ನಡೆಸುತ್ತಿರುವ ಮೂಲ ಒಮಿಕ್ರಾನ್ ಪ್ರಭೇದದ ಉಪತಳಿ ಬಿಎ.2 ಜಾಗತಿಕವಾಗಿ ಹರಡುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಹೇಳಿದೆ. ಆದರೆ, ಈಗಾಗಲೇ ಒಮಿಕ್ರಾನ್ ಸೋಂಕಿತರಲ್ಲಿ ಅದರಿಂದ ಮರುಸೋಂಕು ಉಂಟಾಗುತ್ತದೆಯೋ ಅಥವಾ ಇಲ್ಲವೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ ಎಂದಿದೆ.
ಹೊಸ ನಾಸಿಕ ಸ್ಪ್ರೇ ಮಾರುಕಟ್ಟೆಗೆ ಅನುಮತಿ: ಕರೊನಾ ವೈರಸ್ ನಾಶಕ್ಕೆಂದು ಗ್ಲೆನ್ವಾರ್ಕ್ ಫಾರ್ವಸ್ಯೂಟಿಕಲ್ಸ್ ಅಭಿವೃದ್ಧಿ ಪಡಿಸಿದ 'ಫಾಬಿಸ್ಪ್ರೇ' ನಾಸಿಕಕ್ಕೆ ಸಿಂಪಡಿಸುವ ಔಷಧಕ್ಕೆ ಭಾರತ ಔಷಧ ಮಹಾ ನಿಯಂತ್ರಕರು (ಡಿಸಿಜಿಐ) ಅನುಮತಿ ನೀಡಿದ್ದು, ಸೋಂಕು ನಿಯಂತ್ರಣ ಪ್ರಕ್ರಿಯೆಗೆ ಹೆಚ್ಚಿನ ವೇಗ ಸಿಗಬಹುದೆಂದು ನಿರೀಕ್ಷಿಸಲಾಗಿದೆ.
ಈ ಔಷಧವು ರೋಗಾಣು ವಿರುದ್ಧ ಭೌತಿಕ ಹಾಗೂ ರಾಸಾಯನಿಕ ತಡೆಯಾಗಿ ವರ್ತಿಸುತ್ತದೆ. 'ಗಾಳಿ ಒಳಹೋಗುವ ಮಾರ್ಗದಲ್ಲಿ ಅದು ಕೋವಿಡ್ ವೈರಸ್ಅನ್ನು ಕೊಲ್ಲುತ್ತದೆ' ಎಂದು ಕಂಪನಿ ತಿಳಿಸಿದೆ. ಐರೋಪ್ಯ ಒಕ್ಕೂಟದಿಂದ ಇದಕ್ಕೆ 'ಸಿಇ' ಮಾರ್ಕ್ ಲಭ್ಯವಾಗಿದೆ. ವೈದ್ಯಕೀಯ ಸಾಧನದ ಮಾರುಕಟ್ಟೆಗೆ ನೀಡುವ ಅನುಮೋದನೆಗೆ ಅದು ಸಮಾನವಾಗಿದೆ. ಬಹರೇನ್ ಮತ್ತು ಇಸ್ರೇಲ್ನಲ್ಲಿ ಅದನ್ನು 'ಎನ್ವಾಯ್್ಡ ಹೆಸರಿನಲ್ಲಿ ಮಾರಲಾಗುತ್ತಿದೆ. ವೈರಸ್ ಪ್ರಮಾಣ ಸ್ಪ್ರೇ ಹಾಕಿದ 24 ಗಂಟೆಯಲ್ಲಿ ಶೇಕಡ 94 ಹಾಗೂ 48 ಗಂಟೆಯಲ್ಲಿ ಶೇಕಡ 99ರಷ್ಟು ಕಡಿಮೆಯಾಗುತ್ತದೆ ಎಂದು ಕಂಪನಿ ವಿವರಿಸಿದೆ.
ಅಲ್ಯೂಮಿನಿಯಂ ಬೆಲೆಯೇರಿಕೆ:
ಕೋವಿಡ್ ನಿಯಂತ್ರಣಕ್ಕೆ ಹೇರಿರುವ ಲಾಕ್ಡೌನ್ನಿಂದಾಗಿ ಚೀನಾದ ಬೈಸ್ ನಗರದಲ್ಲಿ ಅಲ್ಯೂಮಿನಿಯಂ ಬೆಲೆ ಗಗನಕ್ಕೇರಿದ್ದು 14 ವರ್ಷಗಳಲ್ಲೇ ಅತಿ ಹೆಚ್ಚಿನ ಬೆಲೆಯೇರಿಕೆ ಯಾಗಿದೆ. ದಕ್ಷಿಣ ಚೀನಾದ ಅಲ್ಯೂಮಿನಿಯಂ ರಾಜಧಾನಿ' ಎಂದು ಹೆಸರುವಾಸಿಯಾದ ಬೈಸ್ನಲ್ಲಿ ವಾರ್ಷಿಕ 22 ಲಕ್ಷ ಟನ್ ಅಲ್ಯೂಮಿನಿಯಂ ಉತ್ಪಾದನೆಯಾಗುತ್ತದೆ. ಲಾಕ್ಡೌನ್ನಿಂದಾಗಿ ಸಾರಿಗೆ ಸಂಚಾರ ಸ್ಥಗಿತಗೊಂಡಿ ರುವುದರಿಂದ ಈ ಲೋಹದ ಸಾಗಾಟಕ್ಕೂ ಕುತ್ತು ಬಂದಿದೆ. ಹೀಗಾಗಿ ಅದರ ಬೆಲೆ ಗಗನಮುಖಿಯಾಗಿದೆ.
ಕೋಟಿ ಮಕ್ಕಳಿಗೆ ಲಸಿಕೆ: ದೇಶದಾದ್ಯಂತ 15-18 ವಯೋಗುಂಪಿನ ಒಂದು ಕೋಟಿಗೂ ಅಧಿಕ ಎಳೆಯರಿಗೆ ಕರೊನಾ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಬುಧವಾರ ಟ್ವೀಟ್ ಮಾಡಿದ್ದಾರೆ.