ಕೊಚ್ಚಿ; ಜುಲೈ 26, 2008 ರಂದು ಅಹಮದಾಬಾದ್‌ನ 21 ಸ್ಥಳಗಳಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದ 13 ವರ್ಷಗಳ ವಿಚಾರಣೆಯ ನಂತರ ಅಹಮದಾಬಾದ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಆರ್ ಪಟೇಲ್ ಇಂದು ತೀರ್ಪು ನೀಡಿದ್ದಾರೆ. ಅಹಮದಾಬಾದ್‌ನಲ್ಲಿ ಸ್ಫೋಟ ನಡೆಸಲು ಕೇರಳದಿಂದ ನಾಲ್ಕು ಬೈಕ್‌ಗಳನ್ನು ಅಕ್ರಮವಾಗಿ ಸಾಗಿಸಲಾಗಿತ್ತು ಎಂದು ತನಿಖಾ ಸಂಸ್ಥೆಗಳು ಪತ್ತೆ ಹಚ್ಚಿದ್ದವು.
ಈ ಪೈಕಿ ಒಂದು ಬೈಕ್ ಕೊಚ್ಚಿ ನಿವಾಸಿಗೆ ಸೇರಿದ್ದು ಎಂದು ಎನ್‌ಐಎ ನಂತರ ಖಚಿತಪಡಿಸಿತ್ತು. ಸ್ಫೋಟದಲ್ಲಿ ಬೈಕ್ ಹಾನಿಗೀಡಾಗಿದ್ದರೂ, ಫೊರೆನ್ಸಿಕ್ ಪರೀಕ್ಷೆಯಲ್ಲಿ ಸಿಕ್ಕಿದ್ದ ಚೇಸ್ ನಂಬರ್ ಆಧರಿಸಿ ಮಟ್ಟಂಚೇರಿ ಮೂಲದ ಬೈಕ್ ಮಾಲೀಕನನ್ನು ಹುಡುಕಲು ತನಿಖಾಧಿಕಾರಿಗಳು 2012ರ ಜೂನ್ ನಲ್ಲಿ ಕೊಚ್ಚಿಗೆ ಆಗಮಿಸಿದ್ದರು.
ತಂಡವು ಮಾಲೀಕರಿಂದ ಮಾಹಿತಿ ಪಡೆದು ಮಟ್ಟಂಚೇರಿ ಆರ್‌ಟಿಒ ಕಚೇರಿ, ಕೊಚ್ಚಿ ಮುನ್ಸಿಪಲ್ ಕಾರ್ಪೊರೇಷನ್ ಪ್ರಾದೇಶಿಕ ಕಚೇರಿ, ಪಡಿತರ ಅಂಗಡಿ ಮತ್ತು ಹತ್ತಿರದ ಮನೆಗಳಲ್ಲಿ ಸಾಕ್ಷ್ಯ ಸಂಗ್ರಹಿಸಿತು. ಮರಣದಂಡನೆಗೆ ಗುರಿಯಾದ 38 ಜನರಲ್ಲಿ ಇಬ್ಬರು ಅವಳಿ ಸಹೋದರರಾದ ಶಿಬಿಲಿ ಎ.ಕರೀಂ ಮತ್ತು ಶಾದುಲಿ ಎ.ಕರೀಂ, ಇಬ್ಬರೂ ಕೊಟ್ಟಾಯಂ ಏರಾಟ್ಟುಪೆಟ್ಟಾದವರು.