ವಾರಣಾಸಿ: ವಾರಣಾಸಿಯ ರೋಹಿತ್ ನಗರದಲ್ಲಿ ನಕಲಿ ಕೋವಿಶೀಲ್ಡ್ ಲಸಿಕೆ ತಯಾರಿಕೆ ಜಾಲ ಪತ್ತೆಯಾಗಿದ್ದು, ಜನರಲ್ಲಿ ಭೀತಿ ಉಂಟು ಮಾಡಿದೆ. ಇದರ ಮೌಲ್ಯ ಅಂದಾಜು 4 ಕೋಟಿ ರೂಪಾಯಿ
ಇರಬಹುದು ಎಂದು ಅಂದಾಜು ಮಾಡಲಾಗಿದೆ.
ನಕಲಿ ಕೋವಿಶೀಲ್ಡ್ ಲಸಿಕೆ ತಯಾರಿಯಲ್ಲಿ ತೊಡಗಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಇದಲ್ಲದೆ ನಕಲಿ ZYCOV-D ಲಸಿಕೆ ಮತ್ತು ಕೋವಿಡ್ ಟೆಸ್ಟಿಂಗ್ ಕಿಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉತ್ತರಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 5 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಈ ಲಸಿಕೆಗಳನ್ನು ಬೇರೆ ರಾಜ್ಯಗಳಿಗೂ ಪೂರೈಕೆ ಮಾಡಲಾಗಿದೆ ಎಂಬ ಮಾಹಿತಿಯೂ ಬಯಲಾಗಿದೆ.