ತಿರುವನಂತಪುರ: ರಾಜ್ಯಾದ್ಯಂತ ಪಲ್ಸ್ ಪೆÇೀಲಿಯೊ ಲಸಿಕೆ ಕಾರ್ಯಕ್ರಮವು ಫೆ.27ರ ಭಾನುವಾರ ನಡೆಯಲಿದೆ. ರಾಜ್ಯ ಮಟ್ಟದ ಉದ್ಘಾಟನೆಯನ್ನು ಪತ್ತನಂತಿಟ್ಟ ಜಿಲ್ಲೆಯಲ್ಲಿ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ನೆರವೇರಿಸಲಿದ್ದಾರೆ. ಕೊರೋನಾ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೊರೋನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಪೋಲಿಯೊ ಲಸಿಕೆ ವಿತರಿಸಲಾಗುವುದು ಎಂದು ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ವಿಶೇಷವಾಗಿ ಸ್ಥಾಪಿಸಲಾದ ಬೂತ್‍ಗಳ ಮೂಲಕ ಕೇರಳದ ಐದು ವರ್ಷದವರೆಗಿನ 24,36,298 ಮಕ್ಕಳಿಗೆ ಪೆÇೀಲಿಯೊ ಹನಿ ಹಾಕುವ ಗುರಿ ಹೊಂದಲಾಗಿದೆ. ಟ್ರಾನ್ಸಿಟ್ ಮತ್ತು ಮೊಬೈಲ್ ಬೂತ್‍ಗಳು ಸೇರಿದಂತೆ 24,614 ಬೂತ್‍ಗಳಿವೆ. ಪೋಲೀಯೊ ಹನಿಗಳನ್ನು ವಿತರಿಸಲು 49,228 ಸ್ವಯಂಸೇವಕರು ಮತ್ತು 2,183 ಮೇಲ್ವಿಚಾರಕರಿಗೆ ತರಬೇತಿ ನೀಡಲಾಗಿದೆ ಎಂದು ಸಚಿವರು ಹೇಳಿದರು.
ಬೆಳಗ್ಗೆ 8ರಿಂದ ಸಂಜೆ 5ರವರೆಗೆ ತೆರೆದಿರುವ ಲಸಿಕಾ ಕೇಂದ್ರಗಳಲ್ಲಿ ದಟ್ಟಣೆ ಉಂಟಾಗದಂತೆ ತಾಯಂದಿರು ವಿಶೇಷ ಕಾಳಜಿ ವಹಿಸಿ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿ ಆರೋಗ್ಯ ಕಾರ್ಯಕರ್ತರು ಸೂಚಿಸಿದ ಸಮಯಕ್ಕೆ ಪೋಲೀಯೋ ಹನಿಗಳನ್ನು ಹಾಕಬೇಕು. ಶಾಲೆಗಳು, ಅಂಗನವಾಡಿಗಳು, ಗ್ರಂಥಾಲಯಗಳು, ಆರೋಗ್ಯ ಕೇಂದ್ರಗಳು, ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳಲ್ಲಿನ ಸಾರಿಗೆ ಬೂತ್‍ಗಳು, ಅತಿಥಿ ನೌಕರರ ಶಿಬಿರಗಳು ಮತ್ತು ಪ್ರವಾಸಿ ಕೇಂದ್ರಗಳ ಮೊಬೈಲ್ ಬೂತ್‍ಗಳ ಮೂಲಕ ಪೋಲೀಯೊ ಹನಿಗಳನ್ನು ವಿತರಿಸಲಾಗುತ್ತದೆ.
ಪೋಲಿಯೋ ಬೂತ್ ಗಳಲ್ಲಿ ಇರುವವರು ಮತ್ತು ಮಕ್ಕಳನ್ನು ಕರೆತರುವವರು ಕೊರೋನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಕ್ಕಳೊಂದಿಗೆ ಬೂತ್‍ಗಳಿಗೆ ಬರುವಾಗ ಕೈಗಳನ್ನು ಸೋಂಕುರಹಿತಗೊಳಿಸಬೇಕು, ಮಾಸ್ಕ್‍ಗಳನ್ನು ಸರಿಯಾಗಿ ಧರಿಸಬೇಕು ಮತ್ತು ದೈಹಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಕೊರೋನಾ ಮಾರ್ಗಸೂಚಿಗಳ ಪ್ರಕಾರ ಪೋಲೀಯೊ ಹನಿಗಳನ್ನು ವಿತರಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ವಿಶೇಷವಾಗಿ ತರಬೇತಿ ಪಡೆದ ಆರೋಗ್ಯ ಕಾರ್ಯಕರ್ತರು ಮತ್ತು ಸ್ವಯಂಸೇವಕರು ಪೋಲೀಯೊ ಹನಿಗಳನ್ನು ವಿತರಿಸುತ್ತಾರೆ. ಸ್ಥಳೀಯಾಡಳಿತ ಸಂಸ್ಥೆಗಳು, ವಿವಿಧ ಇಲಾಖೆಗಳು ಮತ್ತು ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ಪಲ್ಸ್ ಪೋಲಿಯೊ ಲಸಿಕೆ ವಿತರಣೆ ಆಯೋಜಿಸಲಾಗಿದೆ.
2000 ದಿಂದ ಕೇರಳದಲ್ಲಿ ಮತ್ತು 2011 ರ ನಂತರ ಭಾರತದಲ್ಲಿ ಯಾವುದೇ ಪೋಲಿಯೊ ಪ್ರಕರಣಗಳು ವರದಿಯಾಗಿಲ್ಲ. ಮಾರ್ಚ್ 2014 ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ಪೆÇೀಲಿಯೊ ಮುಕ್ತ ದೇಶ ಎಂದು ಘೋಷಿಸಿತ್ತು. ಆದರೆ, ನೆರೆಯ ದೇಶಗಳಲ್ಲಿ ಪೊಲಿಯೊ ವರದಿಯಾಗುತ್ತಿರುವ ಕಾರಣ ನಮ್ಮ ಮಕ್ಕಳಿಗೆ ಪೆÇೀಲಿಯೊ ಲಸಿಕೆ ಹಾಕುವುದನ್ನು ಮುಂದುವರಿಸುವುದು ಅನಿವಾರ್ಯವಾಗಿದೆ. ಆದ್ದರಿಂದ ಎಲ್ಲರೂ ತಮ್ಮ 5 ವರ್ಷದೊಳಗಿನ ಮಕ್ಕಳಿಗೆ ಪೆÇೀಲಿಯೋ ಲಸಿಕೆ ಹಾಕುವಂತೆ ನೋಡಿಕೊಳ್ಳಬೇಕು ಎಂದು ಸಚಿವರು ವಿನಂತಿಸಿದರು.