HEALTH TIPS

ಕ್ಷೇತ್ರದ ಜನತೆಗೆ ಫೆ.5 ಮತ್ತು 6ರಂದು ಕೇಂದ್ರ ಬಜೆಟ್-2022ರ ಬಗ್ಗೆ ವಿವರಣೆ ಕೊಡಿ: ಸಂಸದರಿಗೆ ಬಿಜೆಪಿ ವರಿಷ್ಠರ ಸೂಚನೆ

           ನವದೆಹಲಿ: ಪಕ್ಷದ ಕಾರ್ಯಕರ್ತರಿಗೆ ಕೇಂದ್ರ ಬಜೆಟ್ 2022(Union Budget 2022)ನ್ನು ವಿಸ್ತಾರವಾಗಿ ವಿವರಿಸಿದ ನಂತರ ಕೇಸರಿ ಪಕ್ಷ ಸಂಸದರಿಗೆ ತಮ್ಮ ಕ್ಷೇತ್ರಗಳಲ್ಲಿ ಇದೇ 5 ಮತ್ತು 6ರಂದು ಬಜೆಟ್ ನ ಬಗ್ಗೆ ಜನರಿಗೆ ವಿವರಣೆ ನೀಡುವಂತೆ ಸೂಚನೆ ನೀಡಲಾಗಿದೆ. 

          ಈ ಬಾರಿಯ ಬಜೆಟ್ ನಲ್ಲಿ ಬಡವರು, ಮಧ್ಯಮ ವರ್ಗದವರು ಮತ್ತು ಯುವಕರಿಗೆ ಲಾಭವಾಗುವ ರೀತಿಯಲ್ಲಿ ಯಾವೆಲ್ಲಾ ಕಾರ್ಯಕ್ರಮಗಳನ್ನು ತರಲಾಗಿದೆ, ಯೋಜನೆಗಳೇನೇನು ಎಂದು ಭಾಷಣದಲ್ಲಿ ಪಿಎಂ ಮೋದಿ ವಿವರಿಸಿದ್ದರು. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಗೆ ಸಮಾಜದ ವಿವಿಧ ವಲಯಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

            ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಕಾರ್ಯಕ್ರಮ 'ಆತ್ಮನಿರ್ಭರ್ ಅರ್ಥವ್ಯವಸ್ಥ'ವನ್ನು ಉದ್ದೇಶಿಸಿ ಮಾತನಾಡುತ್ತಾ, ಕೋವಿಡ್ ನಂತರ, ಜಗತ್ತು ಹೊಸದರತ್ತ ತೆರೆದುಕೊಳ್ಳುತ್ತಿದೆ. ಅದರ ಆರಂಭಿಕ ಸೂಚಕಗಳು ಈಗಾಗಲೇ ಗೋಚರಿಸುತ್ತಿವೆ. ರಾಜಕೀಯ ಕೋನವನ್ನು ಬಿಟ್ಟರೆ, ಬಜೆಟ್ ನ್ನು ಎಲ್ಲರೂ ಸ್ವಾಗತಿಸುತ್ತಿದ್ದಾರೆ ಎಂದು ಹೇಳಿದ್ದರು. ಗಡಿ ಗ್ರಾಮಗಳಿಂದ ವಲಸೆ ಹೋಗುವುದು ರಾಷ್ಟ್ರೀಯ ಭದ್ರತೆಗೆ ಒಳ್ಳೆಯದಲ್ಲ. ಗಡಿಯಲ್ಲಿನ 'ವೈಬ್ರಂಟ್ ಹಳ್ಳಿ'ಗಳನ್ನು ಅಭಿವೃದ್ಧಿಪಡಿಸಲು ಬಜೆಟ್‌ನಲ್ಲಿ ಅವಕಾಶಗಳಿವೆ ಎಂದು ಪ್ರಧಾನಿ ಕೇಂದ್ರ ಬಜೆಟ್ ನ್ನು ಸಮರ್ಥಿಸಿಕೊಂಡಿದ್ದರು.

             ಕೇಂದ್ರ ಬಜೆಟ್ 2022: ತಮ್ಮ 91 ನಿಮಿಷಗಳ ಕೇಂದ್ರ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಲವಾರು ಕ್ರಮಗಳನ್ನು ಮತ್ತು ಯೋಜನೆಗಳನ್ನು ಘೋಷಿಸಿದ್ದಾರೆ. ಕಿಸಾನ್ ಡ್ರೋನ್‌ಗಳು, ಆರ್‌ಬಿಐ ಕ್ರಿಪ್ಟೋ ನಾಣ್ಯ, ಡಿಜಿಟಲ್ ಆಸ್ತಿಗಳ ಮೇಲಿನ ತೆರಿಗೆ, 5 ಜಿ ಸ್ಪೆಕ್ಟ್ರಮ್‌ ಜಾರಿ, ನದಿ ಜೋಡಣೆ, ಮೂಲಸೌಕರ್ಯ ಅಭಿವೃದ್ಧಿ, ಇ-ಪಾಸ್‌ಪೋರ್ಟ್‌ಗಳು, ರಕ್ಷಣಾ ಉತ್ಪಾದನೆ. 

ಶೀಘ್ರದಲ್ಲೇ ಎಲ್‌ಐಸಿ ಖಾಸಗೀಕರಣದ ಭರವಸೆ ನೀಡಿದ ಸೀತಾರಾಮನ್ ಅವರು ಎಂಎಸ್‌ಎಂಇಗಳ ಹಂಚಿಕೆಯನ್ನು 6000 ಕೋಟಿ ರೂ.ಗಳಷ್ಟು ವಿಸ್ತರಿಸಲಾಗಿದೆ ಎಂದಿದ್ದರು. ಈಶಾನ್ಯ ರಾಜ್ಯಗಳಿಗೆ 1500 ಕೋಟಿಗಳ ಹಂಚಿಕೆ, 2022-23ರ ವೇಳೆಗೆ ಇ-ಪಾಸ್‌ಪೋರ್ಟ್‌ಗಳು, ನಳ್ಳಿ ನೀರು ಸಂಪರ್ಕಗಳು, ವಸತಿ ಯೋಜನೆಗಳು, ಹೊಸ ಎಸ್‌ಇಜೆಡ್ ಕಾಯ್ದೆ, ರಾಷ್ಟ್ರೀಯ ಟೆಲಿಗಳಿಗೆ ಹಂಚಿಕೆ, ಮಾನಸಿಕ ಆರೋಗ್ಯ ಕಾರ್ಯಕ್ರಮ, ಸೋಲಾರ್ ಮಾಡ್ಯೂಲ್‌ಗಳಿಗೆ 19,500 ಕೋಟಿ ಹಂಚಿಕೆ, ಶೇಕಡಾ 100ರಷ್ಟು ಅಂಚೆ ಕಚೇರಿಗಳು ಬ್ಯಾಂಕ್‌ಗಳಿಗೆ ಲಿಂಕ್ ಮಾಡುವುದು. ಆದಾಯ ತೆರಿಗೆ ಯಥಾಸ್ಥಿತಿ ಮುಂದುವರಿಕೆ, ಸ್ಟಾರ್ಟಪ್‌ಗಳಿಗೆ ಹೆಚ್ಚಿಸದ ತೆರಿಗೆ ಪ್ರೋತ್ಸಾಹಕ, ದೇಶದ ಸ್ವಾತಂತ್ರ್ಯೋತ್ಸವದ 100ನೇ ವರ್ಷಕ್ಕೆ ನೀಲನಕ್ಷೆ ಇವು ಕೇಂದ್ರ ವಿತ್ತ ಸಚಿವೆ ಮಂಡಿಸಿರುವ ಬಜೆಟ್ ನ ಮುಖ್ಯಾಂಶಗಳಾಗಿವೆ. 

         ಸಹಜವಾಗಿ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ಬಜೆಟ್ ನ್ನು ಟೀಕಿಸಿವೆ, ನಿರಾಶಾದಾಯಕ, ಶೂನ್ಯ ಬಜೆಟ್ ಎಂದು ಹೇಳಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries