ನವದೆಹಲಿ : ಭಾರತವು ಆರ್ಥಿಕ ವರ್ಷ 2025-26 ಅಥವಾ 2026-27ರಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂದು ನೂತನ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಹೇಳಿದ್ದಾರೆ.
ನವದೆಹಲಿ : ಭಾರತವು ಆರ್ಥಿಕ ವರ್ಷ 2025-26 ಅಥವಾ 2026-27ರಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂದು ನೂತನ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಹೇಳಿದ್ದಾರೆ.
ಭಾರತವು ಆರ್ಥಿಕ ವರ್ಷ 2024-25ರಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ 2020ರಲ್ಲಿ ಹೇಳಿದ್ದರೆ ಅದನ್ನೀಗ ನೂತನ ಮುಖ್ಯ ಆರ್ಥಿಕ ಸಲಹೆಗಾರರು ಎರಡು ವರ್ಷ ಮುಂದೂಡಿದ್ದಾರೆ.
"ನೈಜ ಜಿಡಿಪಿ ಶೇ 8- ಶೇ 9ರಷ್ಟು ಇರುವಂತೆ ನೋಡಿಕೊಂಡರೆ ಅದು 8% ಡಾಲರ್ ಜಿಡಿಪಿ ಪ್ರಗತಿಯಾದಂತೆ. ಇದನ್ನು ಪರಿಗಣಿಸಿದರೆ ನಾವು 2025-26 ಅಥವಾ 2026-27ರಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಬಹುದು" ಎಂದು ಅವರು ಹೇಳಿದರು.
ಮುಂದಿನ ಆರ್ಥಿಕ ವರ್ಷ- 2022-23ರಲ್ಲಿ ಭಾರತದ ಜಿಡಿಪಿ ಶೇ 8ರಿಂದ ಶೇ 8.5ರಷ್ಟು ಏರಿಕೆಯಾಗಲಿದೆ ಎಂದು ಆರ್ಥಿಕ ಸಮೀಕ್ಷೆ ಅಂದಾಜಿಸಿರುವುದನ್ನು ಇಲ್ಲಿ ಸ್ಮರಿಸಬಹುದು.