ಬೀಜಿಂಗ್: ರಾಷ್ಟ್ರೀಯ ಸುರಕ್ಷತೆ ಮತ್ತು ಭದ್ರತೆಯ ಕಾರಣಗಳನ್ನು ನೀಡಿ ಭಾರತ ಸರಕಾರ ಚೀನೀ ನಿರ್ಮಿತ ಇನ್ನೂ 54 ಆಯಪ್‍ಗಳನ್ನು ಇತ್ತೀಚೆಗೆ ನಿಷೇಧಿಸಿರುವ ಬಗ್ಗೆ ತನ್ನ ತೀವ್ರ ಕಳವಳವನ್ನು ಚೀನಾ ವ್ಯಕ್ತಪಡಿಸಿದೆ. ಭಾರತವು ಚೀನಾದ ಸಂಸ್ಥೆಗಳ ಸಹಿತ ಎಲ್ಲಾ ವಿದೇಶಿ ಹೂಡಿಕೆದಾರರನ್ನು ಪಾರದರ್ಶಕ, ನ್ಯಾಯಯುತ ಮತ್ತು ತಾರತಮ್ಯರಹಿತ ಧೋರಣೆಯಿಂದ ನೋಡಿಕೊಳ್ಳುತ್ತದೆ ಎಂದು ತಾನು ನಿರೀಕ್ಷಿಸುವುದಾಗಿ ಚೀನಾ ಹೇಳಿದೆ.