ಶಬರಿಮಲೆ: ಶಬರಿಮಲೆಗೆ ಮಹಿಳೆಯೋರ್ವೆ ಪ್ರವೇಶಿಸಿದ್ದಾರೆ ಎಂದು ಬಂದಿರುವ ವದಂತಿಗಳು ಸುಳ್ಳು ಪ್ರಚಾರ ಎನ್ನಲಾಗಿದೆ. ಇತ್ತೀಚೆಗೆ ಭೇಟಿ ನೀಡಿದ ಚಿತ್ರನಟ ಚಿರಂಜೀವಿ ಜೊತೆ ಶಬರಿಮಲೆಗೆ ಬಂದ ಮಧುಮತಿ ಚುಕ್ಕಪಲ್ಲಿ ಯುವತಿಯಂತೆ ಕಾಣುತ್ತಿರುವುದು ಪ್ರಚಾರಕ್ಕೆ ಕಾರಣವಾಗಿದೆ. ಆದರೆ ಆಕೆಗೆ ನಿಜವಾಗಿ 55 ವರ್ಷ. ಅವರು ಜುಲೈ 26, 1966 ರಂದು ಜನಿಸಿದರು. ಮಧುಮತಿ ಹೈದರಾಬಾದ್ ಮೂಲದ ಫೀನಿಕ್ಸ್ ಗ್ರೂಪ್ ಅಧ್ಯಕ್ಷ ಸುರೇಶ್ ಚುಕ್ಕಪಲ್ಲಿ ಅವರ ಪತ್ನಿ. ಮಧುಮತಿ ಅವರು ಫೀನಿಕ್ಸ್ ಗ್ರೂಪ್‍ನ ನಿರ್ದೇಶಕಿಯೂ ಆಗಿದ್ದಾರೆ.ಫೆ. 13ರಂದು ಬೆಳಗ್ಗೆ ಚಿರಂಜೀವಿ, ಪತ್ನಿ ಸುರೇಖಾ, ಸುರೇಶ್ ಚುಕ್ಕಪಲ್ಲಿ ಹಾಗೂ ಮಧುಮತಿ ಚುಕ್ಕಪಲ್ಲಿ ಶಬರಿಮಲೆಗೆ ಭೇಟಿ ನೀಡಿದ್ದರು.
ಸುರೇಶ್ ಮತ್ತು ಮಧುಮತಿ ಅವರ ಪುತ್ರ ಚುಕ್ಕಪಲ್ಲಿ ಅವಿನಾಶ್ ಕೂಡ ಈ ಬಗ್ಗೆ ವಿವರಣೆ ನೀಡಿದ್ದಾರೆ. ‘ಆರೋಪಗಳು ನನ್ನ ತಾಯಿಯ ಬಗ್ಗೆ. ತಾಯಿ 1966 ರಲ್ಲಿ ಜನಿಸಿದರು. 2017ರಲ್ಲಿ ಶಬರಿಮಲೆ ದೇವಸ್ಥಾನಕ್ಕೆ ಧ್ವಜಸ್ತಂಭವನ್ನೂ ನೀಡಿದ್ದೇವೆ. "ನನಗೆ 34 ವರ್ಷ" ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚಿರಂಜೀವಿ ಮತ್ತು ಸುರೇಶ್ ಚುಕ್ಕಪಲ್ಲಿ ಮತ್ತು ಅವರ ಕುಟುಂಬ ಮಂಗಳವಾರ ಗುರುವಾಯೂರ್ ದೇವಸ್ಥಾನಕ್ಕೆ ಭೇಟಿ ನೀಡಿತ್ತು. ಕೊಚ್ಚಿಯಿಂದ ಹೆಲಿಕಾಪ್ಟರ್ ಮೂಲಕ ಶಬರಿಮಲೆಗೆ ಭೇಟಿ ನೀಡಿದ ಚಿರಂಜೀವಿ ಗುರುವಾಯೂರು ದೇವಸ್ಥಾನಕ್ಕೂ ಭೇಟಿ ನೀಡಿದರು. ಈ ಹಿಂದೆ 2012ರಲ್ಲಿ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕøತಿ ಸಚಿವರಾಗಿದ್ದಾಗ ಚಿರಂಜೀವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.