ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿ 550 ಟನ್ ಸಾಮರ್ಥ್ಯದ 'ಗೋಬರ್-ಧನ್' ಜೈವಿಕ-ಸಿಎನ್‌ಜಿ ಘಟಕವನ್ನು (ಬಯೋ-ನ್ಯಾಚುರಲ್ ಕಂಪ್ರೆಸ್ಡ್ ಗ್ಯಾಸ್) ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಶನಿವಾರ ಉದ್ಘಾಟಿಸಿದರು.
ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿ 550 ಟನ್ ಸಾಮರ್ಥ್ಯದ 'ಗೋಬರ್-ಧನ್' ಜೈವಿಕ-ಸಿಎನ್‌ಜಿ ಘಟಕವನ್ನು (ಬಯೋ-ನ್ಯಾಚುರಲ್ ಕಂಪ್ರೆಸ್ಡ್ ಗ್ಯಾಸ್) ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಶನಿವಾರ ಉದ್ಘಾಟಿಸಿದರು.
'ಇದಕ್ಕೆ ಗೋವರ್ಧನ ಘಟಕ ಎಂದು ಹೆಸರಿಡಲಾಗಿದ್ದು, ತ್ಯಾಜ್ಯದಿಂದ ಸಂಪತ್ತಿನ ನವೀಕರಣ ಎಂಬ ಪರಿಕಲ್ಪನೆಯಡಿ ಈ ಘಟಕವನ್ನು ನಿರ್ಮಿಸಲಾಗಿದೆ' ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.
'ದಶಕಗಳಿಂದ ದೇಶದಾದ್ಯಂತ ಸಾವಿರಾರು ಎಕರೆಗಳನ್ನು ತ್ಯಾಜ್ಯ ಆಕ್ರಮಿಸಿಕೊಂಡಿದೆ. ಇದರಿಂದಾಗಿ ವಾಯು ಮತ್ತು ಜಲ ಮಾಲಿನ್ಯ ಹೆಚ್ಚಾಗಿದೆ. ಇದು ರೋಗಗಳ ಹರಡುವಿಕೆಗೆ ಪ್ರಮುಖ ಕಾರಣವೂ ಆಗಿದೆ. ಹಾಗಾಗಿ, ಸ್ವಚ್ಛ ಭಾರತ ಅಭಿಯಾನದ ಎರಡನೇ ಹಂತದಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು' ಎಂದು ಅವರು ತಿಳಿಸಿದ್ದಾರೆ.
'ಭಾರತದಲ್ಲಿ ಏಳೆಂಟು ವರ್ಷಗಳ ಹಿಂದೆ ಪೆಟ್ರೋಲ್‌ನಲ್ಲಿ ಶೇಕಡ 1 ರಿಂದ 2ರಷ್ಟು ಎಥೆನಾಲ್ ಬಳಸಲಾಗುತ್ತಿತ್ತು. ಇದೀಗ ಎಥೆನಾಲ್ ಪ್ರಮಾಣವು ಶೇಕಡ 8ಕ್ಕೆ ಏರಿಕೆಯಾಗಿದೆ. ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಲ್ಲಿ ಒಣ ಹುಲ್ಲು ಬಳಸಬೇಕೆಂಬ ಮಹತ್ವದ ನಿರ್ಧಾರವನ್ನು ನಾವು ಕೈಗೊಂಡಿದ್ದೇವೆ. ಇದು ರೈತರ ಸಮಸ್ಯೆಗಳನ್ನು ಬಗೆಹರಿಸುವುದಲ್ಲದೇ, ಅವರಿಗೆ ಹೆಚ್ಚಿನ ಆದಾಯವನ್ನೂ ನೀಡುತ್ತದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.