ನವದೆಹಲಿ: ಬಿಸ್ಕತ್, ಸೌಂದರ್ಯವರ್ಧಕ ಉತ್ಪನ್ನ ಮತ್ತು ಗೃಹೋಪಯೋಗಿ ಉಪಕರಣಗಳ ಬೆಲೆ ಪ್ರಸಕ್ತ ತ್ರೖೆಮಾಸಿಕದಲ್ಲಿ ಇನ್ನೊಂದು ಬಾರಿ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಉತ್ಪಾದನಾ ವೆಚ್ಚದಲ್ಲಿ ಭಾರಿ ಹೆಚ್ಚಳ ಹಾಗೂ ಲಾಭಾಂಶದಲ್ಲಿ ಕೊರತೆ ಎದುರಿಸುತ್ತಿರುವುದರಿಂದ ದರ ಏರಿಸಲು ಚಿಂತನೆ ನಡೆಸಲಾಗುತ್ತಿದೆ.

ಈ ತ್ರೖೆಮಾಸಿಕದಲ್ಲಿ ಶೇ.5 ಬೆಲೆಯೇರಿಕೆ ಮಾಡುವ ಸಾಧ್ಯತೆಯಿದೆ ಎಂದು ಅವರು ಸುಳಿವು ನೀಡಿದ್ದಾರೆ. ಕೆಲವು ಕಂಪನಿಗಳು ಈಗಾಗಲೇ ಬೆಲೆಯೇರಿಸಿದ್ದು ಇನ್ನು ಕೆಲವು ಸಂಸ್ಥೆಗಳು ಆ ಪ್ರಕ್ರಿಯೆಯಲ್ಲಿವೆ. ಕಳೆದ 18 ತಿಂಗಳಿಂದ ಸಾಮಗ್ರಿಗಳ ಬೆಲೆಗಳು ಯದ್ವಾತದ್ವಾ ಏರಿಕೆಯಾಗಿವೆ ಎಂದು ಫ್ಯಾನ್, ಕೂಲರ್ ಮತ್ತು ಕಿಚನ್ ಉತ್ಪನ್ನಗಳ ತಯಾರಕ ಸಂಸ್ಥೆಯಾದ ಓರಿಯೆಂಟ್ ಇಲೆಕ್ಟ್ರಾನಿಕ್ಸ್ ಹೇಳಿದೆ. ಪ್ಲಾಸ್ಟಿಕ್, ಉಕ್ಕು, ತಾಮ್ರ ಮೊದಲಾದವುಗಳ ಬೆಲೆ ತೀವ್ರ ಏರಿಕೆ ಕಂಡಿವೆ ಎಂದು ಓರಿಯೆಂಟ್ನ ಬಿಸಿನೆಸ್ ಹೆಡ್ ಸಲೀಲ್ ಕಪೂರ್ ಹೇಳಿದ್ದು, ಕಂಪನಿ ವಿವಿಧ ಉತ್ಪನ್ನಗಳ ಬೆಲೆಗಳನ್ನು ಶೇಕಡ 4ರಿಂದ 7 ಏರಿಸುವ ಸಾಧ್ಯತೆಯಿದೆ ಎಂದಿದ್ದಾರೆ. ಸಾಗಾಟ ವೆಚ್ಚ ಬಹಳಷ್ಟು ತುಟ್ಟಿಯಾಗಿದೆ. ಅದನ್ನು ಗ್ರಾಹಕರ ಮೇಲೆ ಹೊರಿಸುವುದಲ್ಲದೆ ಬೇರೆ ದಾರಿಯೇ ಇಲ್ಲ. ಸ್ವಲ್ಪ ಸಮಯದ ಹಿಂದೆ ಬೆಲೆಯೇರಿಕೆ ಮಾಡಿದ್ದು ಪ್ರಸಕ್ತ ತ್ರೖೆಮಾಸಿಕದಲ್ಲಿ ಇನ್ನೊಮ್ಮೆ ಮಾಡುತ್ತೇವೆ ಎಂದು ಕಪೂರ್ ಹೇಳಿದ್ದಾರೆ.