ಮೊಡವೆಗಳಿಂದ ಸಮಸ್ಯೆ ಎದುರಿಸುತ್ತಿರುವವರು ಸಾಕಷ್ಟು ಮಂದಿ. ತ್ವಚೆಯ ಆರೈಕೆ ಮತ್ತು ವಿವಿಧ ರೀತಿಯ ಸೌಂದರ್ಯವರ್ಧಕಗಳನ್ನು ಬಳಸಿದ ನಂತರವೂ ಅವು ಹೋಗುವುದಿಲ್ಲ. ಮೊಡವೆಗಳಿಗೆ ಮಾಲಿನ್ಯ, ಒತ್ತಡ, ಅನಾರೋಗ್ಯಕರ ಜೀವನಶೈಲಿಗಳಂತಹ ಹಲವಾರು ಕಾರಣಗಳಿವೆ. ಆದರೆ, ಕೆಲವೊಮ್ಮೆ ಈ ಸಮಸ್ಯೆಯು ಹೊಟ್ಟೆಯಿಂದಲೇ ಅಂದರೆ ದೇಹದ ಒಳಗಿನಿಂದಲೇ ಉಂಟಾಗುತ್ತದೆ. ಇದಕ್ಕಾಗಿ ದೇಹವನ್ನು ಸ್ವಚ್ಛಗೊಳಿಸುವ ವಿಧಾನವನ್ನು ಪ್ರಯತ್ನಿಸಬೇಕು, ಇದರಿಂದ ಮೊಡವೆಯನ್ನು ತೆಗೆದುಹಾಕಲು ಸಹಾಯವಾಗುತ್ತದೆ.
ಅದಕ್ಕಾಗಿ ಆರೋಗ್ಯಕರ ಆಹಾರದ ಹೊರತಾಗಿ, ಕೆಲವು ಆರೋಗ್ಯಕರ ಪಾನೀಯಗಳನ್ನು ಸೇವಿಸಿ. ಇದನ್ನು ಪ್ರತಿದಿನ ಸೇವಿಸುವುದರಿಂದ ಸಮಸ್ಯೆಗಳು ಹೆಚ್ಚಾಗುವುದನ್ನು ತಡೆಯಬಹುದು. ಅಲ್ಲದೆ, ಗಿಡಮೂಲಿಕೆಯಾಗಿರುವುದರಿಂದ, ಇದು ಚರ್ಮಒಳಗಿನಿಂದ ಹೊಳೆಯುವಂತೆ ಮಾಡುತ್ತದೆ. ನೀವು ಮೊಡವೆ ಸಮಸ್ಯೆಗಳನ್ನು ಹೊಂದಿದ್ದರೆ, ಖಂಡಿತವಾಗಿಯೂ ನಿಮ್ಮ ಆಹಾರದಲ್ಲಿ ಈ ಆರೋಗ್ಯಕರ ಪಾನೀಯಗಳನ್ನು ಸೇರಿಸಿ. ಬದಲಾವಣೆಯನ್ನು ಕೆಲವೇ ದಿನಗಳಲ್ಲಿ ಕಾಣಬಹುದು.ಗ್ರೀನ್ ಟೀ: ನೀವೇನಾದರೂ ಬೆಳಿಗ್ಗೆ ಬೇಗನೆ ಚಹಾವನ್ನು ಕುಡಿಯಲು ಬಯಸಿದರೆ, ಗ್ರೀನ್ ಟೀ ಸೇವಿಸಿ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವುದರ ಜೊತೆಗೆ, ಅನೇಕ ಪೋಷಕಾಂಶಗಳನ್ನು ಹೊಂದಿದೆ. ಇವುಗಳು ಚರ್ಮವನ್ನು ಹೊಳೆಯುವಂತೆ ಮಾಡಲು ಮತ್ತು ಒಳಗಿನಿಂದ ಮೊಡವೆಗಳನ್ನು ಮುಕ್ತಗೊಳಿಸಲು ಸಹಾಯ ಮಾಡುತ್ತದೆ. ಬೇಕಿದ್ದಲ್ಲಿ ಗ್ರೀನ್ ಟೀಗೆ ನಿಂಬೆ ಮಿಶ್ರಣ ಮಾಡಬಹುದು. ಇದು ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುವುದು, ಜೊತೆಗೆ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುವುದು.
ನೆಲ್ಲಿಕಾಯಿ ರಸ: ಮೊಡವೆಗಳ ಸಮಸ್ಯೆಯನ್ನು ನಿವಾರಿಸಲು ಮತ್ತು ದೇಹವನ್ನು ಒಳಗಿನಿಂದ ನಿರ್ವಿಷಗೊಳಿಸಲು ಬೆಳಿಗ್ಗೆ ಬೇಗನೆ ನೆಲ್ಲಿಕಾಯಿ ಜ್ಯೂಸ್ ಕುಡಿಯಿರಿ. ಇದು ರುಚಿಯಲ್ಲಿ ಸ್ವಲ್ಪ ಕಹಿಯಾಗಿರುವುದರಿಂದ, ಉಗುರುಬೆಚ್ಚನೆಯ ನೀರಿನಲ್ಲಿ ಮಿಶ್ರಣ ಮಾಡಿ. ಮನೆಯಲ್ಲಿ ತಯಾರಿಸಿದ ನೆಲ್ಲಿಕಾಯಿ ಜ್ಯೂಸ್ ಅನ್ನು ಪ್ರಯತ್ನಿಸಿ. ಇದರ ಹೊರತಾಗಿ, ಅದನ್ನು ಸ್ಮೂಥಿ ಅಥವಾ ಇತರ ತರಕಾರಿಗಳೊಂದಿಗೆ ಬೆರೆಸಿ ಸೇವಿಸಬಹುದು.
ಹಣ್ಣಿನ ರಸ: ಮೊಡವೆಗಳನ್ನು ಗುಣಪಡಿಸಲು ಹಣ್ಣಿನ ರಸವನ್ನು ಅತ್ಯಂತ ಪರಿಣಾಮಕಾರಿ. ಇದಕ್ಕಾಗಿ ನೀವು ಕ್ಯಾರೆಟ್, ದಾಳಿಂಬೆ ಮತ್ತು ಬೀಟ್‌ರೂಟ್ ರಸವನ್ನು ಆಯ್ಕೆ ಮಾಡಬಹುದು. ಕ್ಯಾರೆಟ್ ಮತ್ತು ಬೀಟ್ರೂಟ್ ವಿಟಮಿನ್ ಎ ಅನ್ನು ಹೊಂದಿದ್ದು, ಇದು ಮೊಡವೆ, ಸುಕ್ಕುಗಳು ಮತ್ತು ಪಿಗ್ಮೆಂಟೇಶನ್ ಅನ್ನು ತಡೆಯುತ್ತದೆ. ಇದರೊಂದಿಗೆ, ಇದು ಚರ್ಮದ ಟೋನ್‌ನ್ನು ಸರಿಪಡಿಸುವುದು, ಇದಲ್ಲದೆ, ಬೀಟ್ರೂಟ್ ರಕ್ತ ಪರಿಚಲನೆ ಸುಧಾರಿಸುತ್ತದೆ. ಆದ್ದರಿಂದ ದಿನನಿತ್ಯದ ಉಪಾಹಾರದಲ್ಲಿ ಇದನ್ನು ಸೇರಿಸುವುದು ಉತ್ತಮ ಪ್ರಯೋಜನವನ್ನು ನೀಡುತ್ತದೆ.
ಬೇವಿನೆಲೆಯ ರಸ: ಬೇವಿನ ಎಲೆಗಳು ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದ್ದು, ಹಿಂದಿನ ಕಾಲದಲ್ಲಿ ಈ ಎಲೆಗಳನ್ನು ಮುಂಜಾನೆ ತಿನ್ನುತ್ತಿದ್ದರು. ಇದರ ಜ್ಯೂಸ್ ಮಾಡಲು , ಬೇವಿನ ಎಲೆಗಳನ್ನು ತೊಳೆದು ಮಿಕ್ಸಿಗೆ ಹಾಕಿ, ಅದಕ್ಕೆ ಅರ್ಧ ಲೋಟ ನೀರು ಬೆರೆಸಿ ನಂತರ ರುಬ್ಬಿಕೊಳ್ಳಿ. ಈಗ ಅದನ್ನು ಫಿಲ್ಟರ್ ಮಾಡಿ ಕುಡಿಯಿರಿ. ನಿಮಗೆ ಬೇಕಾದರೆ, ಅದಕ್ಕೆ ಜೇನುತುಪ್ಪವನ್ನು ಕೂಡ ಬೆರೆಸಬಹುದು. ಇದು ರುಚಿಯಲ್ಲಿ ಅತ್ಯಂತ ಕಹಿಯಾಗಿದ್ದರೂ, ಮೊಡವೆಗಳ ಚಿಕಿತ್ಸೆಯಲ್ಲಿ ಇದು ಅತ್ಯಂತ ಪರಿಣಾಮಕಾರಿಯಾಗಿದೆ.
ಲೆಮನ್ ಗ್ರಾಸ್ /ಮಜ್ಜಿಗೆ ಸೊಪ್ಪು ಪಾನೀಯ: ಲೆಮನ್ ಗ್ರಾಸ್ ಚರ್ಮ ಮತ್ತು ಕೂದಲಿನ ಸೌಂದರ್ಯವನ್ನು ಹೆಚ್ಚಿಸಲು ಹಲವು ರೀತಿಯಲ್ಲಿ ಕೆಲಸ ಮಾಡುತ್ತದೆ. ಇದರ ಪಾನೀಯವನ್ನು ಮೊಡವೆಗಳ ಸಮಸ್ಯೆಯನ್ನು ನಿವಾರಿಸಲು ಬಳಸಬಹುದು. ಇದರಲ್ಲಿರುವ ವಿಟಮಿನ್ ಎ, ಫೋಲಿಕ್ ಆಮ್ಲ, ಸತು, ಕಬ್ಬಿಣ, ಪೊಟ್ಯಾಸಿಯಮ್ ಮುಂತಾದ ಅಂಶಗಳು ದೇಹವನ್ನು ನಿರ್ವಿಷಗೊಳಿಸುತ್ತವೆ. ಈ ಮೂಲಕ ಮೊಡವೆಯನ್ನು ಹೋಗಲಾಡಿಸುತ್ತವೆ. ಮೊಡವೆ ಸಮಸ್ಯೆ ನಿವಾರಣೆಗೆ ಇದರ ಟೀ ಕೂಡ ಕುಡಿಯಬಹುದು.