HEALTH TIPS

ಯುಪಿಎಸ್‌ಸಿ ಅಧಿಸೂಚನೆ: ಜೂನ್‌ 5ರಂದು ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ

         ನವದೆಹಲಿ: ದೇಶದಲ್ಲಿ 861 ಹುದ್ದೆಗಳ ಭರ್ತಿಗಾಗಿ 2022ನೇ ಸಾಲಿನ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯನ್ನು ಜೂನ್‌ 5ರಂದು ನಡೆಸುವ ಸಂಬಂಧ ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ಅಧಿಸೂಚನೆ ಹೊರಡಿಸಿದೆ.

            ಅಭ್ಯರ್ಥಿಗಳು ಫೆಬ್ರುವರಿ 22ರಂದು ಸಂಜೆ 6ರೊಳಗೆ ಆನ್‌ಲೈನ್‌ನಲ್ಲಿ ( www.upsconline.nic.in ) ಅರ್ಜಿ ಸಲ್ಲಿಸಬಹುದು.

           ಆನ್‌ಲೈನ್ ಅರ್ಜಿಗಳನ್ನು ಮಾರ್ಚ್ 1 ರಿಂದ ಮಾರ್ಚ್ 7 ರ ಸಂಜೆ 6 ರೊಳಗೆ ಹಿಂಪಡೆಯಬಹುದು.

           'ನಿಗದಿತ ಅವಧಿ ಮುಗಿದ ಬಳಿಕ ಅರ್ಜಿ ಹಿಂಪಡೆಯುವ ಮನವಿಯನ್ನು ಆಯೋಗವು ಸ್ವೀಕರಿಸುವುದಿಲ್ಲ' ಎಂದೂ ಅಧಿಸೂಚನೆಯಲ್ಲಿ ಹೇಳಲಾಗಿದೆ.

           'ಲಿಂಗ ಸಮತೋಲನವನ್ನು ಪ್ರತಿಬಿಂಬಿಸುವ ಕಾರ್ಯಪಡೆಯನ್ನು ಹೊಂದಲು ಸರ್ಕಾರವು ಶ್ರಮಿಸುತ್ತಿದೆ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸುತ್ತಿದೆ' ಎಂದು ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries