ನವದೆಹಲಿ: ಕಳೆದೆರಡು ತಿಂಗಳಲ್ಲಿ ದೇಶ ವಿರೋಧಿ ಹಾಗೂ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ್ದ 60ಕ್ಕೂ ಹೆಚ್ಚು ಸಾಮಾಜಿಕ ಜಾಲತಾಣ ಖಾತೆಗಳನ್ನು ಬಂದ್ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ.
ನವದೆಹಲಿ: ಕಳೆದೆರಡು ತಿಂಗಳಲ್ಲಿ ದೇಶ ವಿರೋಧಿ ಹಾಗೂ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ್ದ 60ಕ್ಕೂ ಹೆಚ್ಚು ಸಾಮಾಜಿಕ ಜಾಲತಾಣ ಖಾತೆಗಳನ್ನು ಬಂದ್ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ.
ಮೇಲ್ಮನೆಯಲ್ಲಿ ಪ್ರಶ್ನೋತ್ತರ ವೇಳೆ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್.ಮುರುಗನ್, ಸರ್ಕಾರ ಜನರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತದೆ.
ಸುಳ್ಳು ಸುದ್ದಿ ಹರಡುವ ಟೆಕ್‌ಫಾಗ್ ಆಯಪ್ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುರುಗನ್, ಸರಕಾರವು ವಾಸ್ತವ ಪರಿಶೀಲನೆ (ಫ್ಯಾಕ್ಟ್ ಚೆಕ್) ಘಟನೆ ಸ್ಥಾಪಿಸಿ, ಸುಳ್ಳು ಸುದ್ದಿಗಳ ಮೇಲೆ ನಿಗಾವಹಿಸಿದೆ. ವೈರಲ್ ಆಗುವ ಸುದ್ದಿಗಳ ಸತ್ಯಾಂಶ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಕಳೆದ ತಿಂಗಳಲ್ಲಿ ಕೇಂದ್ರ ಸರಕಾರ ಭಾರತ ವಿರೋಧಿಯಾಗಿ ಸುದ್ದಿ ಪ್ರಸಾರ ಮಾಡಲಾಗುತ್ತಿದ್ದ 35 ಯ್ಯೂಟೂಬ್ ಚಾನಲ್, ಎರಡು ಟ್ವಿಟರ್ ಖಾತೆ ಮತ್ತು ಇನ್ಸ್ಟಾಗ್ರಾಮ್ ಮತ್ತು ಒಂದು ಫೇಸ್‌ಬುಕ್ ಖಾತೆಯನ್ನು ನಿಷ್ಕ್ರಿಯಗೊಳಿಸಿತ್ತು. ಡಿಸೆಂಬರ್‌ನಲ್ಲಿ 20 ಯೂಟ್ಯೂಬ್ ವಾಹಿನಿ ಮತ್ತು ಎರಡು ವೆಬ್‌ಸೈಟ್ ಸ್ಥಗಿತಗೊಳಿಸಲಾಗಿದೆ.