ತಿರುವನಂತಪುರ: ಆಸೆ, ಕನಸುಗಳಿಗೆ ಯಾರೂ ತಡೆಯೊಡ್ಡಲು ಸಾಧ್ಯವಿಲ್ಲ. ಆದರೆ ಕೆಲವರಿಗೆ ಮಾತ್ರ ಇಷ್ಟಾರ್ಥಗಳು ಸಿದ್ದಿಯಾಗುತ್ತದೆ. ಕೆಲವರು ಸಂಕಟಕ್ಕಾಗಿ ತಮ್ಮ ಆಸೆಗಳನ್ನು ನಿರ್ದಯವಾಗಿ ತಿರಸ್ಕರಿಸುತ್ತಾರೆ. ಬಿಕ್ಕಟ್ಟುಗಳನ್ನು ನಿವಾರಿಸಿ ಅವರ ಆಕಾಂಕ್ಷೆಗಳನ್ನು ಸಾಧಿಸುವವರನ್ನು ಜಗತ್ತು ಯಾವಾಗಲೂ ಆಶೀರ್ವದಿಸುತ್ತದೆ. ಇಂತಹ 62ರ ಹರೆಯದ ಹಿರಿಯ ಮಹಿಳೆಯೊಬ್ಬರ ವೀಡಿಯೋ ಇದೀಗ ಗಮನ ಸೆಳೆಯುತ್ತಿದೆ. ಈ ಅಜ್ಜಿ ಕೇರಳದ ಎರಡನೇ ಅತಿ ದೊಡ್ಡ ಶಿಖರವಾದ ಅಗಸ್ತ್ಯರ್‍ಕೂಡಂ ಶಿಖರವನ್ನು ಏರಿದ್ದು, ಯುವಕರು ಕೂಡ ಹಿಂಜರಿಯುವ ಬೆಟ್ಟ ಹತ್ತಿರುವುದು ವಿಶೇಷ.
ಬೆಂಗಳೂರಿನ ನಾಗರತ್ನಮ್ಮ ಅವರ ಸಾಹಸ ಪಯಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾಗರತ್ನಮ್ಮ ಅವರಿಗೆ 62 ವರ್ಷ. ವೀಡಿಯೋದಲ್ಲಿ ನಾಗರತ್ನಮ್ಮ ಬಂಡೆಗಲ್ಲುಗಳ ಹಗ್ಗ ಹಿಡಿದು ಕೂಲ್ ಆಗಿ ಮೇಲಕ್ಕೆ ಏರುತ್ತಿರುವುದನ್ನು ಕಾಣಬಹುದು. ಅಗಸ್ತ್ಯರ್ಕೂಡಂ 1868 ಮೀಟರ್ ಎತ್ತರವಿರುವ ಬೆಟ್ಟವಾಗಿದೆ. ನಾಗರತ್ನಮ್ಮ ಅವರು ಅಗಸ್ತ್ಯರಕೂಡಂ ಬೆಟ್ಟವನ್ನು ಹತ್ತಲು ತಮ್ಮ ಪುತ್ರ ಮತ್ತು ಸ್ನೇಹಿತರೊಂದಿಗೆ ಬೆಂಗಳೂರಿನಿಂದ ತಿರುವನಂತಪುರಕ್ಕೆ ಬಂದಿದ್ದರು.
ವಿವಾಹದ ಬಳಿಕ ಮೊದಲ ಬಾರಿಗೆ ನಾಗರತ್ನಮ್ಮ ಕರ್ನಾಟಕ ಬಿಟ್ಟು ಬೇರೆ ರಾಜ್ಯಕ್ಕೆ ಹೋಗುತ್ತಿರುವುದು ಇದೇ ಮೊದಲಂತೆ. ಅದು ಸುಮಾರು 40 ವರ್ಷಗಳ ನಂತರ. ವಿವಾಹ ನಂತರ ಸಂಸಾರಕ್ಕಾಗಿ ಬದುಕಿದ ನಾಗರತ್ನಮ್ಮ ಈಗ ತನಗಾಗಿ ಬದುಕುತ್ತಿದ್ದಾರೆ. ಮಕ್ಕಳು ಕುಟುಂಬ ಸಮೇತರಾಗಿ ಬಾಳಲು ಆರಂಭಿಸಿರುವ ನಾಗರತ್ನಮ್ಮ ತಮ್ಮ ಮನದೊಳಗಿನ ಆಸೆಗಳನ್ನು ಈಡೇರಿಸಿಕೊಳ್ಳುವ ಪ್ರಯತ್ನ ಆರಂಭಿಸಿದ್ದಾರೆ.
ವೀಡಿಯೊ................