HEALTH TIPS

ಪಿಎಂ ಕೇರ್ಸ್ ನಿಧಿಯಲ್ಲಿ ಬಳಕೆಯಾಗದ 64% ಹಣ: ತನಿಖೆಗೆ ವಿಪಕ್ಷಗಳು ಪಟ್ಟು

            ನವದೆಹಲಿ : ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಉದ್ದೇಶಕ್ಕಾಗಿ ಸ್ಥಾಪಿಸಲಾದ ಪಿಎಂ ಕೇರ್ಸ್ ನಿಧಿಯ ಕುರಿತು ಮಹತ್ವದ ಮಾಹಿತಿಯೊಂದು ಮುನ್ನೆಲೆಗೆ ಬಂದಿದೆ. ವಾಸ್ತವವಾಗಿ 27 ಮಾರ್ಚ್ 2020 ರಿಂದ 31 ಮಾರ್ಚ್ 2021 ರ ನಡುವೆ, ಕೋವಿಡ್ ಸಹಾಯವಾಗಿ PM ಕೇರ್ಸ್ ನಿಧಿಯಲ್ಲಿ 10,990 ಕೋಟಿ ರೂಪಾಯಿಗಳ ಆರ್ಥಿಕ ನೆರವು ಬಂದಿದೆ. ಈ ಒಟ್ಟು ಮೊತ್ತದ ಸುಮಾರು ಶೇ.64ರಷ್ಟು ಬಳಕೆಯೇ ಆಗಿಲ್ಲ ಎಂಬುದು ಮಹತ್ವದ ಮಾಹಿತಿ.

          ಮಾರ್ಚ್ 2021 ರವರೆಗೆ ಪಿಎಂ ಕೇರ್ಸ್ ಫಂಡ್‌ನಲ್ಲಿ 7014 ಕೋಟಿ

    NDTV ಯ ವರದಿ ಪ್ರಕಾರ, ಮಾರ್ಚ್ 2021 ರವರೆಗೆ, PM ಕೇರ್ಸ್ ಫಂಡ್‌ನಲ್ಲಿ 7014 ಕೋಟಿ ರೂಪಾಯಿಗಳವರೆಗೆ ಸಂಗ್ರಹಿಸಲಾಗಿದೆ. ಪಿಎಂ ಕೇರ್ಸ್ ಫಂಡ್ ಅನ್ನು 1 ವರ್ಷದ ಹಿಂದೆ ಸ್ಥಾಪಿಸಲಾಯಿತು. ಯಾವುದೇ ರೀತಿಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸ್ಥಾಪಿಸಲಾದ ಪಿಎಂ ಕೇರ್ಸ್ ನಿಧಿಯಲ್ಲಿ ಮೊದಲ ವರ್ಷದಲ್ಲಿ ಕೇವಲ 3976 ಕೋಟಿ ರೂ. ಸಂಗ್ರಹವಾಗಿದೆ. 2020 ರ ಆರ್ಥಿಕ ವರ್ಷದ ಆರಂಭದಲ್ಲಿ, 3077 ಕೋಟಿ ರೂಪಾಯಿ ದೇಣಿಗೆಯಾಗಿ ಬಂದಿತು ಮತ್ತು ಈ ಮೊತ್ತದ ಮೇಲೆ 235 ಕೋಟಿ ರೂಪಾಯಿಗಳನ್ನು ಬಡ್ಡಿಯಾಗಿ ಗಳಿಸಲಾಗಿದೆ.

           ಯಾವುದಕ್ಕೆಲ್ಲ ಖರ್ಚು? ಆದರೆ, ಕಳೆದ ವರ್ಷ ಮಾರ್ಚ್ ವರೆಗೆ ಈ ನಿಧಿಯಿಂದ (3976 ಕೋಟಿ ರೂ.) ಸರ್ಕಾರ ಕೇವಲ 6.6 ಕೋಟಿ ಕೋವಿಡ್ ಲಸಿಕೆ ಡೋಸ್ ಖರೀದಿಸಲು 1,392 ಕೋಟಿ ರೂಪಾಯಿ ಖರ್ಚು ಮಾಡಿದೆ. ಇದಲ್ಲದೆ, 50 ಸಾವಿರ ವೆಂಟಿಲೇಟರ್‌ಗಳನ್ನು ಖರೀದಿಸಲು ಸರ್ಕಾರವು 1311 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಇದರಲ್ಲಿ ಅನೇಕ ಸಂದರ್ಭಗಳಲ್ಲಿ ಆ ವೆಂಟಿಲೇಟರ್‌ಗಳು ದೋಷಯುಕ್ತವಾಗಿರುವುದು ಕಂಡುಬಂದಿದೆ ಅಥವಾ ತರಬೇತಿ ಪಡೆದ ವೈದ್ಯಕೀಯ ಸಿಬ್ಬಂದಿ ಕೊರತೆಯಿಂದಾಗಿ ಅವುಗಳನ್ನು ಬಳಸಲಾಗಿಲ್ಲ.
            ಜಮ್ಮು ಮತ್ತು ಕಾಶ್ಮೀರ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಿಂದ ಇಂತಹ ಹಲವು ಪ್ರಕರಣಗಳು ವರದಿಯಾಗಿವೆ. ಇದಲ್ಲದೆ, ದೇಶದ ವಲಸೆ ಜನಸಂಖ್ಯೆಯ ಕಲ್ಯಾಣಕ್ಕಾಗಿ ಸರ್ಕಾರ ಕೇವಲ 1000 ಕೋಟಿಗಳನ್ನು ಖರ್ಚು ಮಾಡಿದೆ. 2020 ರ ಮೊದಲ ಲಾಕ್‌ಡೌನ್‌ನಲ್ಲಿ, ವಲಸೆ ಕಾರ್ಮಿಕರ ಚಿತ್ರಗಳು ಬಹಳಷ್ಟು ಮುನ್ನೆಲೆಗೆ ಮಾಡಿದ್ದವು. ಕೊರೋನಾ ಎರಡನೇ ಅಲೆಯಲ್ಲಿ ಸರ್ಕಾರವು 162 ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿತ್ತು, ಇದಕ್ಕಾಗಿ 201.58 ಕೋಟಿ ರೂಪಾಯಿ ಖರ್ಚು ಮಾಡಿದೆ. ಜೊತೆಗೆ ಕೋವಿಡ್ ಲಸಿಕೆಗಳ ಪರೀಕ್ಷೆ ಮತ್ತು ಬಿಡುಗಡೆಗಾಗಿ ಸರ್ಕಾರ ನಡೆಸುವ ಪ್ರಯೋಗಾಲಯಗಳ ಉನ್ನತೀಕರಣಕ್ಕಾಗಿ 20.41 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಪಿಎಂ ಕೇರ್ಸ್ ಫಂಡ್ ವಿರುದ್ಧ ಪ್ರತಿಪಕ್ಷಗಳ ಕಿಡಿ ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ PM ಫಂಡ್ ಬಗ್ಗೆ ವಿರೋಧ ಪಕ್ಷಗಳು ಧ್ವನಿ ಎತ್ತಿವೆ. ಇದರ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿವೆ. ಹಣ ದುರ್ಬಳಕೆಯ ಅನುಮಾನ ವ್ಯಕ್ತಪಡಿಸಿ ಸೂಕ್ತ ತನಿಖೆಗೆ ವಿರೋಧ ಪಕ್ಷಗಳು ಪದೇ ಪದೇ ಒತ್ತಾಯಿಸುತ್ತಿವೆ.
            PM-Cares Fund ಸರ್ಕಾರಿ ನಿಧಿ ಅಲ್ಲ ಪ್ರಧಾನ ಮಂತ್ರಿ ವಿಪತ್ತು ನಿರ್ವಹಣಾ ನಿಧಿಯ ಬದಲಾಗಿ 2020 ರ ಮಾರ್ಚ್‌ 27ರಂದು ಈ ನಿಧಿಯನ್ನು ಸ್ಥಾಪನೆ ಮಾಡಲಾಗಿತ್ತು. ಆದರೆ ಇದು ಹಲವು ರಾಜಕೀಯ ನಾಯಕರ, ಹೋರಾಟಗಾರರ ವಿರೋಧಕ್ಕೆ ಕಾರಣವಾಗಿತ್ತು. ಇದರ ಪಾರದರ್ಶಕತೆ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದವು. ಸೆ.14 ರಂದು ಕೇಂದ್ರ ಸರ್ಕಾರ ಈ ಉತ್ತರವನ್ನು ದೆಹಲಿ ಹೈ ಕೋರ್ಟ್‌ಗೆ ನೀಡಿದ್ದು, ಪಿಎಂ ಕೇರ್ಸ್ ಫಂಡ್‌ ಕೇಂದ್ರ ಅಥವಾ ಯಾವುದೇ ರಾಜ್ಯ ಸರ್ಕಾರದ ನಿಯಂತ್ರಣದಲ್ಲಿ ಇಲ್ಲ. ಈ ಟ್ರಸ್ಟ್‌ನ ಕಾರ್ಯಾಚರಣೆಗೆ ಉಭಯ ಸರ್ಕಾರಗಳೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾಗಿಯಾಗುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries