ಕೊಟ್ಟಾಯಂ: ಹಾವು ಕಡಿತಕ್ಕೆ ಒಳಗಾಗಿ ಕೊಟ್ಟಾಯಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಾವಾ ಸುರೇಶ್ ಅವರಿಗೆ 65 ಬಾಟಲಿ ಆಂಟಿವೆನಿನ್ ನೀಡಲಾಗಿದೆ. ಕೊಟ್ಟಾಯಂ ವೈದ್ಯಕೀಯ ಕಾಲೇಜು ಅಧೀಕ್ಷಕ ಡಾ.ಎಸ್.ಎಸ್. ಟಿ.ಕೆ.ಜಯಕುಮಾರ್ ಈ ಬಗ್ಗೆ ಮಾಹಿತಿ ನೀಡಿರುವರು. ಸಾಮಾನ್ಯ ನಾಗರಹಾವು ಕಚ್ಚಿದರೆ 25 ಬಾಟಲಿಗಳ ಆಂಟಿವೆನಿನ್ ಚುಚ್ಚುಮದ್ದು ನೀಡಲಾಗುತ್ತದೆ.
ಆಂಟಿವೆನಿನ್ ಮೊದಲ ಚುಚ್ಚುಮದ್ದಿನಲ್ಲಿ ಗಮನಾರ್ಹ ಬದಲಾವಣೆಯಾಗದ ಕಾರಣ ಹೆಚ್ಚಿನ ಔಷಧವನ್ನು ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ವಾವಾ ಸುರೇಶ್ ಅವರ ದೇಹದಲ್ಲಿ ಹೆಚ್ಚಿನ ಪ್ರಮಾಣದ ವಿಷಕಾರಿ ಅಂಶಗಳಿದ್ದ ಕಾರಣ ಹೆಚ್ಚು ಆಂಟಿವೆನಿನ್ ನೀಡಬೇಕಾಯಿತು. ವೈದ್ಯರ ಪರಿಶ್ರಮದಿಂದ ವಾವಾ ಸುರೇಶ್ ರನ್ನು ಉಳಿಸಿಕೊಳ್ಳಲಾಗಿದೆ. ಸುರೇಶ್ ಅವರ ಆರೋಗ್ಯ ತಪಾಸಣೆಗಾಗಿ ವೈದ್ಯಕೀಯ ಮಂಡಳಿ ಪ್ರತಿದಿನ ಸಭೆ ನಡೆಸುತ್ತಿದೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವುದಾಗಿ ಸುರೇಶ್ ತಿಳಿಸಿರುವುದಾಗಿ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ವಿ.ಎನ್.ವಾಸವನ್ ತಿಳಿಸಿದ್ದಾರೆ. ಇನ್ನು ಮುಂದೆ ಮುಂಜಾಗ್ರತಾ ಕ್ರಮದಿಂದ ಹಾವು ಹಿಡಿಯುವುದಾಗಿ ವಾವ ಸುರೇಶ್ ಹೇಳಿರುವರು. ಕರಿ ನಾಗರ ಕಚ್ಚಿದ್ದರಿಂದ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿತು. ಹಾವನ್ನು ಚೀಲಕ್ಕೆ ತುಂಬುವ ಪ್ರಯತ್ನ ನಡೆಸುವ ವೇಳೆ ಹಾವು ಹಲವು ಬಾರಿ ಕಡಿಯಿತು.
ಕಳೆದ ಸೋಮವಾರ ಸಂಜೆ ಕೊಟ್ಟಾಯಂನಲ್ಲಿ ವಾವಾ ಸುರೇಶ್ ಅವರಿಗೆ ನಾಗರಹಾವು ಕಚ್ಚಿತ್ತು. ಹಾವನ್ನು ಗೋಣಿಚೀಲಕ್ಕೆ ತುಂಬಲು ಯತ್ನಿಸಿದಾಗ ಬಲಗಾಲಿನ ಮೊಣಕಾಲಿಗೆ ಹಾವು ಕಚ್ಚಿದೆ. ಅಷ್ಟರಲ್ಲಿ ವಾವ ಸುರೇಶ ಹಾವನ್ನು ಗೋಣಿಚೀಲಕ್ಕೆ ತುಂಬಿಯಾಗಿತ್ತು. ನಂತರ ವಾವಾ ಸುರೇಶ್ ಅವರನ್ನು ಕಾರಿನಲ್ಲಿ ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ವೈದ್ಯಕೀಯ ಕಾಲೇಜು ಅಧೀಕ್ಷಕ ಡಾ.ಟಿ.ಕೆ.ಜಯಕುಮಾರ್ ನೇತೃತ್ವದ ಆರು ಮಂದಿ ತಜ್ಞ ವೈದ್ಯರ ತಂಡ ವಾವಾ ಸುರೇಶ್ ಅವರಿಗೆ ಚಿಕಿತ್ಸೆ ನೀಡಿತು.