HEALTH TIPS

ರಾಜ್ಯದಲ್ಲಿ 6,757 ಮಂದಿ ಜನರಿಗೆ ಕೊರೊನಾ ಪತ್ತೆ


        ತಿರುವನಂತಪುರ: ರಾಜ್ಯದಲ್ಲಿ ಇಂದು 6757 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.  ಎರ್ನಾಕಳಂ 1462, ತಿರುವನಂತಪುರ 750, ಕೋಝಿಕ್ಕೋಡ್ 653, ಕೊಟ್ಟಾಯಂ 542, ತ್ರಿಶೂರ್ 542, ಕೊಲ್ಲಂ 501, ಆಲಪ್ಪುಳ 363, ಮಲಪ್ಪುರಂ 339, ಪಾಲಕ್ಕಾಡ್ 316, ಪತ್ತನಂತಿಟ್ಟ 311,ಇಡುಕ್ಕಿ 298,  ವಯನಾಡ್ 285, ಕಣ್ಣೂರು 270, ಕಾಸರಗೋಡು 125 ಎಂಬಂತೆ ಸೋಂಕು ಬಾಧಿಸಿದೆ.
        ಕಳೆದ 24 ಗಂಟೆಗಳಲ್ಲಿ 62,301 ಮಾದರಿಗಳನ್ನು ಪರೀಕ್ಷಿಸಲಾಗಿದೆ.
      ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,80,392 ಮಂದಿ ಜನರು ನಿಗಾದಲ್ಲಿದ್ದಾರೆ.  ಇವರಲ್ಲಿ 1,76,266 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ ಮತ್ತು 4,126 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ.  632 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಪ್ರಸ್ತುತ, 75,017 ಕೊರೋನಾ ಪ್ರಕರಣಗಳಲ್ಲಿ, 5.5 ಪ್ರತಿಶತದಷ್ಟು ಜನರು ಆಸ್ಪತ್ರೆ / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
         ಕಳೆದ 24 ಗಂಟೆಗಳಲ್ಲಿ 16 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.  ಇದಲ್ಲದೆ, ಹಿಂದಿನ ದಿನಗಳಲ್ಲಿ ದಾಖಲೆಗಳನ್ನು ತಡವಾಗಿ ಸ್ವೀಕರಿಸಿದ ಕಾರಣ 96 ಸಾವುಗಳು ಮತ್ತು ಸುಪ್ರೀಂ ಕೋರ್ಟ್‌ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ್ದರಿಂದ 412 ಸಾವುಗಳು ವರದಿಯಾಗಿವೆ.  ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 64,053ಕ್ಕೆ ಏರಿಕೆಯಾಗಿದೆ.
        ಇಂದು ಸೋಂಕು ಪತ್ತೆಯಾದವರಲ್ಲಿ 44 ಮಂದಿ ಹೊರ ರಾಜ್ಯದವರು.  6314 ಮಂದಿ ಜನರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ.  349 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ.  ಇಂದು 50 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢೀಕರಿಸಲಾಗಿದೆ.
          ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 17,086 ಮಂದಿ ಜನರು ಗುಣಮುಖರಾಗಿದ್ದಾರೆ.  ತಿರುವನಂತಪುರ 2554, ಕೊಲ್ಲಂ 1074, ಪತ್ತನಂತಿಟ್ಟ 751, ಆಲಪ್ಪುಳ 995, ಕೊಟ್ಟಾಯಂ 1530, ಇಡುಕ್ಕಿ 1054, ಎರ್ನಾಕುಳಂ 3145, ತ್ರಿಶೂರ್ 1532, ಪಾಲಕ್ಕಾಡ್ 665, ಮಲಪ್ಪುರಂ 970, ಕಣ್ಣೂರು 597, ಕಾಸರಗೋಡು 252 ಎಂಬಂತೆ ಗುಣಮುಖರಾಗಿದ್ದಾರೆ.  
        ಇದರೊಂದಿಗೆ 75,017 ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.  ಇದುವರೆಗೆ 63,23,697 ಮಂದಿ ಕೊರೊನಾದಿಂದ ಮುಕ್ತರಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries