ಕೋಝಿಕ್ಕೋಡ್ : ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದು ಅನಿವಾಸಿ ಭಾರತೀಯ ಮೃತಪಟ್ಟ ಪ್ರಕರಣದಲ್ಲಿ ಅವಲಂಬಿತರಿಗೆ 7.4 ಕೋಟಿ ರೂ. ಪರಿಹಾರ ಮೊತ್ತ ಪಾವತಿಸಲು ಸೂಚಿಸಲಾಗಿದೆ. ಕತಾರ್‍ನಲ್ಲಿ ಇಂಜಿನಿಯರ್ ಆಗಿದ್ದ ಮಮ್ಮುಟ್ಟಿ ಅವರು ಮಲಪ್ಪುರಂ ದಕ್ಷಿಣ ಮುನ್ನಿಯೂರಿನಲ್ಲಿರುವ ಚೋನಾರಿ ಎಂಬವರ ಮನೆಗೆ ತೆರಳುತ್ತಿದ್ದಾಗ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದರು. ಕೋಝಿಕ್ಕೋಡ್ ಮೋಟಾರ್ ಅಪಘಾತ ಪರಿಹಾರ ನ್ಯಾಯಮಂಡಳಿ (ಎಂಎಸಿಟಿ) ಪ್ರಕರಣದಲ್ಲಿ ಪರಿಹಾರವನ್ನು ನೀಡಿದೆ.
ಮಮ್ಮುಟ್ಟಿ ತೇಂಜಿಪಾಲಂನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು. ಈ ಭೀಕರ ಅಪಘಾತ ಜುಲೈ 12, 2017 ರ ಸಂಜೆ ಸಂಭವಿಸಿತ್ತು. ರಜೆಯ ಮೇಲೆ ಕತಾರ್‍ನಿಂದ ಊರಿಗೆ ಮರಳುತ್ತಿದ್ದ ಮಮ್ಮುಟ್ಟಿ ನಡೆದುಕೊಂಡು ಹೋಗುತ್ತಿದ್ದಾಗ ಬಸ್ ಡಿಕ್ಕಿ ಹೊಡೆದಿದೆ. ಪ್ರಕರಣದಲ್ಲಿ ಎಂಎಸಿಟಿ ನ್ಯಾಯಾಧೀಶ ಸಾಲಿಹ್ ಅವರು ಮಮ್ಮುಟ್ಟಿ ಅವರ ಪೋಷಕರು, ಪತ್ನಿ ಮತ್ತು 4 ಮಂದಿ ಪುತ್ರಿಯರಿಗೆ 7,40,68,940 ರೂ ಪರಿಹಾರ, ಬಡ್ಡಿ ಮತ್ತು ನ್ಯಾಯಾಲಯದ ವೆಚ್ಚವನ್ನು ನೀಡುವಂತೆ ಆದೇಶಿಸಿದರು.
ಅಡ್ವ. ಎಂಸಿ ರತ್ನಾಕರನ್ ಮತ್ತು ಅಡ್ವ. ಅಬ್ದುಲ್ ಗಮಲ್ ನಾಸರ್ ಉಪಸ್ಥಿತರಿದ್ದರು. ಪರಿಹಾರವನ್ನು ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಮತ್ತು ಕೆಎಸ್‍ಆರ್‍ಟಿಸಿ ಪಾವತಿಸಬೇಕಿದೆ.