ತಿರುವನಂತಪುರ: ಕೇರಳದಲ್ಲಿ ಇಂದು 7,780 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಎರ್ನಾಕುಳಂ 1403, ತಿರುವನಂತಪುರ 858, ಕೋಝಿಕ್ಕೋಡ್ 746, ತ್ರಿಶೂರ್ 692, ಕೊಟ್ಟಾಯಂ 661, ಕೊಲ್ಲಂ 604, ಆಲಪ್ಪುಳ 486, ಮಲಪ್ಪುರಂ 444, ಇಡುಕ್ಕಿ 434, ಪತ್ತನಂತಿಟ್ಟ 386, ಪಾಲಕ್ಕಾಡ್ 363, ವಯನಾಡ್ 324, ಕಣ್ಣೂರು 282, ಕಾಸರಗೋಡು 97 ಎಂಬಂತೆ ಕೋವಿಡ್ ದೃಢಪಟ್ಟಿದೆ.
ಕಳೆದ 24 ಗಂಟೆಗಳಲ್ಲಿ 63,192 ಮಾದರಿಗಳನ್ನು ಪರೀಕ್ಷಿಸಲಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,97,630 ಮಂದಿ ಜನರು ನಿಗಾದಲ್ಲಿದ್ದಾರೆ. ಇವರಲ್ಲಿ 1,93,186 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ ಮತ್ತು 4,444 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 626 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಸ್ತುತ 85,875 ಕೊರೋನಾ ಪ್ರಕರಣಗಳಲ್ಲಿ, 5 ಪ್ರತಿಶತದಷ್ಟು ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.
ಕಳೆದ 24 ಗಂಟೆಗಳಲ್ಲಿ 18 ಮಂದಿ ಕೊರೊನಾ ಬಾಧಿಸಿ ಮೃತರಾಗಿದ್ದಾರೆ. ಇದಲ್ಲದೆ, ದಾಖಲೆಗಳನ್ನು ತಡವಾಗಿ ಸ್ವೀಕರಿಸಿದ ಕಾರಣ ಹಿಂದಿನ ದಿನಗಳಲ್ಲಿ 43 ಸಾವುಗಳು ಮತ್ತು ಸುಪ್ರೀಂ ಕೋರ್ಟ್‌ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ್ದರಿಂದ 130 ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 63,529ಕ್ಕೆ ಏರಿಕೆಯಾಗಿದೆ.
ಇಂದು ಸೋಂಕು ಪತ್ತೆಯಾದವರಲ್ಲಿ 69 ಮಂದಿ ಹೊರ ರಾಜ್ಯದವರು. ಸಂಪರ್ಕದ ಮೂಲಕ 7,124 ಮಂದಿ ಜನರು ಸೋಂಕಿಗೆ ಒಳಗಾಗಿದ್ದಾರೆ. 537 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು 50 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಟ್ಟಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 21,134 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 2789, ಕೊಲ್ಲಂ 3378, ಪತ್ತನಂತಿಟ್ಟ 1312, ಆಲಪ್ಪುಳ 1013, ಕೊಟ್ಟಾಯಂ 1915, ಇಡುಕ್ಕಿ 1243, ಎರ್ನಾಕುಳಂ 2932, ತ್ರಿಶೂರ್ 1631, ಪಾಲಕ್ಕಾಡ್ 837, ಮಲಪ್ಪುರಂ 1343, ಕೋಝಿಕ್ಕೋಡ್ 1245, ವಯನಾಡ್ 639, ಕಣ್ಣೂರು 633, ಕಾಸರಗೋಡು 224 ಎಂಬಂತೆ ಗುಣಮುಖರಾಗಿದ್ದಾರೆ.