ಕಾಸರಗೋಡು: ಆಜಾದಿ ಕ ಅಮೃತ ಮಹೋತ್ಸವದ ಅಂಗವಾಗಿ ಕಾರಡ್ಕ ಅರಣ್ಯ ಸತ್ಯಾಗ್ರಹ ಸ್ಮರಣಾರ್ಥ ಮಾರ್ಚ್ 7 ರಂದು ಜಿಲ್ಲಾ ಮಾಹಿತಿ ಕಛೇರಿ, ಕಾರಡ್ಕ ಬ್ಲಾಕ್ ಪಂಚಾಯತ್ ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಜಿಲ್ಲೆಯ ಸಚಿವರು ಹಾಗೂ ಜನಪ್ರತಿನಿಧಿಗಳು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಚಿತ್ರಕಲಾ ಸಮಾವೇಶ, ಮೆರವಣಿಗೆ, ಸಂಗೀತ ಶಿಲ್ಪಕಲೆ, ಗಜಲ್ ಸಂಗೀತ ಸಂಜೆ ಹಾಗೂ ಜಾನಪದ ಗೀತೆಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ನಿನ್ನೆ ಕಾರಡ್ಕ ಬ್ಲಾಕ್ ಪಂಚಾಯತಿಯಲ್ಲಿ ಪೂರ್ವಭಾವೀ ಸಭೆ ನಡೆಯಿತು.
ಕಾರ್ಯಕ್ರಮದ ಪೂರ್ವಭಾವಿಯಾಗಿ ಮಾರ್ಚ್ 6 ರಂದು ಜಿಲ್ಲೆಯ ವಿವಿಧ ಚಿತ್ರಕಲಾವಿದರ ನೇತೃತ್ವದಲ್ಲಿ ಸಮುದಾಯ ಚಿತ್ರಕಲೆ ನಡೆಯಲಿದೆ.
ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಾಹಿತಿ ಅಧಿಕಾರಿ ಮಧುಸೂದನನ್ ವಿಷಯ ಮಂಡಿಸಿದÀರು. ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಕೆ.ರಮಣಿ, ಕಾರಡ್ಕ ಪಂಚಾಯಿತಿ ಉಪಾಧ್ಯಕ್ಷೆ ಎಂ.ರಜನಿ, ಬ್ಲಾಕ್ ಪಂಚಾಯಿತಿ ಸದಸ್ಯ ಎಂ. ಕುಂಞಂಬು ನಂಬಿಯಾರ್ ಮೊದಲಾದವರು ಮಾತನಾಡಿದರು.