ನವದೆಹಲಿ: ಭಯೋತ್ಪಾದನೆ ಷಡ್ಯಂತ್ರ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಫೆ.19 ರಂದು ರಾಜಸ್ಥಾನ, ಜಮ್ಮು-ಕಾಶ್ಮೀರ ಸೇರಿ 8 ಕಡೆಗಳಲ್ಲಿ ದಾಳಿ ನಡೆಸಿದೆ.
ಜಮ್ಮು-ಕಾಶ್ಮೀರದ ಕುಪ್ವಾರ, ಶೋಪಿಯಾನ್, ರಜೌರಿ, ಬದ್ಗೌಮ್, ಗಂದೇರ್ಬಲ್, ಸೋಪೋರ್ ಗಳಲ್ಲಿ ಹಾಗೂ ರಾಜಸ್ಥಾನದ ಜೋಧ್ ಪುರದಲ್ಲಿ ಭಯೋತ್ಪದನ ನಿಗ್ರಹ ಸಂಸ್ಥೆ ಶೋಧ ಕಾರ್ಯಾಚರಣೆ ನಡೆಸಿದೆ.
ಶೋಧಕಾರ್ಯಾಚರಣೆ ವೇಳೆ ಡಿಜಿಟಲ್ ಡಿವೈಸ್ ಗಳು, ಸಿಮ್ ಕಾರ್ಡ್ ಹಾಗೂ ಡಿಜಿಟಲ್ ಸ್ಟೋರೇಜ್ ಡಿವೈಸ್ ಸೇರಿದಂತೆ ಎನ್ಐಎ ವಿವಿಧ ದೋಷಾರೋಪಣೆಗೆ ಪೂರಕವಾಗುವ ದಾಖಲೆಗಳನ್ನು ವಶಕ್ಕೆ ಪಡೆದಿದೆ.
ಜಮ್ಮು-ಕಾಶ್ಮೀರದಲ್ಲಿ ಭೀಕರ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದ್ದರ ಪ್ರಕರಣಕ್ಕೆ ಸಂಬಂಧಿಸಿದ ಶೋಧಕಾರ್ಯಾಚರಣೆ ಇದಾಗಿದೆ. ಲಷ್ಕರ್-ಎ-ತೊಯ್ಬಾ, ಜೈಶ್-ಎ- ಮೊಹಮ್ಮದ್, ಹಿಜ್ಬ್-ಉಲ್-ಮುಜಾಹಿದ್ದೀನ್, ಅಲ್ ಬದರ್ ಹಾಗೂ ಸಹ ಸಂಸ್ಥೆಗಳು ಈ ಸಂಚು ರೂಪಿಸಿವೆ. ಪ್ರಕರಣದ ಸಂಬಂಧ ಎನ್ಐಎ ಈ ವರೆಗೂ 28 ಮಂದಿಯನ್ನು ಬಂಧಿಸಿದೆ.