ತಿರುವನಂತಪುರ; ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಹೊಸ ಕಾರು ಖರೀದಿಸಲು ಹಣ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ಆದೇಶ ನೀಡಿದೆ. ಕಾರು ಖರೀದಿಸಲು ರಾಜ್ಯಪಾಲರಿಗೆ ಸರ್ಕಾರ 85 ಲಕ್ಷ ರೂ. ಬೆಂಜ್ ಕಾರು ಖರೀದಿಸಲು ಅನುಮತಿ ನೀಡಿದೆ. ಈ ಹಿಂದೆ ಕಾರು ಖರೀದಿಸಲು ಸರ್ಕಾರ ನಿರ್ಧರಿಸಿತ್ತು, ಆದರೆ ನಿನ್ನಯಷ್ಟೇ ಆದೇಶ ಹೊರಡಿಸಲಾಗಿದೆ.
ಸದ್ಯ ರಾಜ್ಯಪಾಲರು ಬಳಸುತ್ತಿರುವ ಬೆಂಜ್ 12 ವರ್ಷ ಹಳೆಯದು ಎನ್ನಲಾಗಿದೆ. ಒಂದು ಲಕ್ಷ ಕಿಲೋಮೀಟರ್ ಸಂಚರಿಸಿದ ಬಳಿಕ ವಿಐಪಿ ಪೆÇ್ರೀಟೋಕಾಲ್ ಪ್ರಕಾರ ವಾಹನವನ್ನು ಬದಲಾಯಿಸಲಾಗುತ್ತಿದೆ. ರಾಜ್ಯಪಾಲರ ಈಗಿನ ವಾಹನ ಪ್ರಸ್ತುತ 1.5 ಲಕ್ಷ ಕಿಲೋಮೀಟರ್ ಸಂಚರಿಸಿದೆ.
ರಾಜ್ಯಪಾಲರು ಕಾರು ಕೊಡಿ ಎಂದು ಕೇಳಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಸರಕಾರಕ್ಕೆ ಹೊಸ ಕಾರು ಕೇಳಲು ರಾಜಭವನದಿಂದ ಕಡತ ರವಾನಿಸಿಲ್ಲ. ಕೆಲವು ಪ್ರವಾಸಗಳನ್ನು ಹೊರತುಪಡಿಸಿ ರಾಜ್ಯಪಾಲರು ಪತ್ನಿ ಬಳಸುವ ವಾಹನವನ್ನು ಒಂದು ವರ್ಷದಿಂದ ಬಳಸುತ್ತಿದ್ದಾರೆ. ಯಾವ ವಾಹನ ಬೇಕು ಎಂಬುದನ್ನು ಸರ್ಕಾರ ನಿರ್ಧರಿಸಬಹುದು ಎಂದು ರಾಜ್ಯಪಾಲರು ಹೇಳಿದ್ದಾರೆ.