ತಿರುವನಂತಪುರ: ರಾಜ್ಯದಲ್ಲಿ ಇಂದು 8655 ಮಂದಿಗೆ ಕೋವಿಡ್ ಪತ್ತೆಯಾಗಿದೆ. ಎರ್ನಾಕುಳಂ 1696, ತಿರುವನಂತಪುರ 1087, ಕೊಲ್ಲಂ 812, ತ್ರಿಶೂರ್ 746, ಕೊಟ್ಟಾಯಂ 731, ಕೋಝಿಕ್ಕೋಡ್ 610, ಆಲಪ್ಪುಳ 567, ಪತ್ತನಂತಿಟ್ಟ 447, ಇಡುಕ್ಕಿ 420, ಮಲಪ್ಪುರಂ 405, ಕಣ್ಣೂರು 357, ಪಾಲಕ್ಕಾಡ್ 343, ವಯನಾಡ್ 332, ಕಾಸರಗೋಡು 102 ಎಂಬಂತೆ ಸೋಂಕು ಧೃಢಪಟ್ಟಿದೆ.
ಕಳೆದ 24 ಗಂಟೆಗಳಲ್ಲಿ 64,650 ಮಾದರಿಗಳನ್ನು ಪರೀಕ್ಷಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 2,14,307 ಮಂದಿ ಜನರು ನಿಗಾದಲ್ಲಿದ್ದಾರೆ. ಇವರಲ್ಲಿ 2,09,925 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ ಮತ್ತು 4,382 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ. 67,424 ಕೋವಿಡ್ ಪ್ರಕರಣಗಳಲ್ಲಿ, 4.5 ಶೇಕಡಾ ಜನರು ಆಸ್ಪತ್ರೆಗಳು / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 18 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇದಲ್ಲದೆ, ಹಿಂದಿನ ದಿನಗಳಲ್ಲಿ ದಾಖಲೆಗಳನ್ನು ತಡವಾಗಿ ಸ್ವೀಕರಿಸಿದ ಕಾರಣ 108 ಸಾವುಗಳು ಮತ್ತು ಸುಪ್ರೀಂ ಕೋರ್ಟ್‌ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ್ದರಿಂದ 193 ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 63,338ಕ್ಕೆ ಏರಿಕೆಯಾಗಿದೆ.
ಇಂದು ಸೋಂಕು ಪತ್ತೆಯಾದವರಲ್ಲಿ 24 ಮಂದಿ ಹೊರ ರಾಜ್ಯದವರು. 7884 ಮಂದಿ ಜನರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. 660 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು 87 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಟ್ಟಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 22,707 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 5811, ಕೊಲ್ಲಂ 1540, ಪತ್ತನಂತಿಟ್ಟ 542, ಆಲಪ್ಪುಳ 1360, ಕೊಟ್ಟಾಯಂ 2680, ಇಡುಕ್ಕಿ 743, ಎರ್ನಾಕುಳಂ 2783, ತ್ರಿಶೂರ್ 1832, ಪಾಲಕ್ಕಾಡ್ 821, ಮಲಪ್ಪುರಂ 1183, ಕೋಝಿಕ್ಕೋಡ್ 1420, ವಯನಾಡ್ 780, ಕಣ್ಣೂರು 950, ಕಾಸರಗೋಡು 262 ಎಂಬಂತೆ ಗುಣಮುಖರಾಗಿದ್ದಾರೆ.