HEALTH TIPS

ಕೋವಿಡ್ ಲಸಿಕೆಗೆ ಆಧಾರ್ ಕಡ್ಡಾಯವಲ್ಲ, ಗುರುತು ಪತ್ರ ರಹಿತವಾಗಿ 87 ಲಕ್ಷ ಜನರಿಗೆ ಲಸಿಕೆ: ಸುಪ್ರೀಂ ಕೋರ್ಟ್ ಗೆ ಕೇಂದ್ರ ಮಾಹಿತಿ

         ನವದೆಹಲಿ: ಕೋವಿಡ್-19 ಲಸಿಕೆಗಾಗಿ CO-WIN ಪೋರ್ಟಲ್‌ನಲ್ಲಿ ಆಧಾರ್ ಕಾರ್ಡ್ ವಿವರಗಳನ್ನು ಸಲ್ಲಿಸುವುದು ಕಡ್ಡಾಯ ಪೂರ್ವ ಷರತ್ತಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

       ಕೋವಿಡ್ ಲಸಿಕೆಗಾಗಿ ಆಧಾರ್ ಕಾರ್ಡ್ ಕಡ್ಡಾಯದ ಕುರಿತು ನಡೆದ ವಿಚಾರಣೆಯಲ್ಲಿ ಈ ಕುರಿತು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದ್ದು, CO-WIN ಪೋರ್ಟಲ್‌ನಲ್ಲಿ ಆಧಾರ್ ಕಾರ್ಡ್ ವಿವರಗಳನ್ನು ಸಲ್ಲಿಸುವುದು ಕಡ್ಡಾಯ ಪೂರ್ವ ಷರತ್ತಲ್ಲ. ಗುರುತಿನ ಚೀಟಿ ಇಲ್ಲದೇ ದೇಶದಲ್ಲಿ 87 ಲಕ್ಷ ಜನರಿಗೆ  ಕೋವಿಡ್ ಲಸಿಕೆ ಹಾಕಲಾಗಿದೆ ಎಂದು ಮಾಹಿತಿ ನೀಡಿದೆ.

          ಸಚಿವಾಲಯದ ಪರ ವಾದ ಮಂಡಿಸಿದ ವಕೀಲ ಅಮನ್ ಶರ್ಮಾ, ಆಧಾರ್ ಮಾತ್ರ ಪೂರ್ವ ಷರತ್ತಲ್ಲ ಮತ್ತು ಯಾವುದೇ ಗುರುತಿನ ಚೀಟಿ ಇಲ್ಲದ 87 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ಇದನ್ನೂ ಓದಿ: ಕೋವಿಡ್-19 ಲಸಿಕೆ ಕಡ್ಡಾಯದಿಂದ ಯಾರೂ ಏನನ್ನೂ ಕಳೆದುಕೊಳ್ಳುತ್ತಿಲ್ಲ: 'ಸುಪ್ರೀಂ'ಗೆ ಕೇಂದ್ರದ ಹೇಳಿಕೆ

            ಇದಕ್ಕೂ ಮೊದಲು, ಕೆಲವು ಲಸಿಕಾ ಕೇಂದ್ರಗಳು ವ್ಯಾಕ್ಸಿನೇಷನ್‌ಗಾಗಿ ಆಧಾರ್ ಕಾರ್ಡ್‌ಗೆ ಒತ್ತಾಯಿಸುತ್ತವೆ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಲೇವಾರಿ ಮಾಡುವಾಗ, ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಸೂರ್ಯ ಕಾಂತ್ ಅವರ ಪೀಠವು ಕೋವಿಡ್ ಅನ್ನು ನಿರ್ವಹಿಸುವ ಉದ್ದೇಶಕ್ಕಾಗಿ ಗುರುತಿನ ಏಕೈಕ ಪುರಾವೆಯಾಗಿ ಆಧಾರ್ ಕಾರ್ಡ್ ಅನ್ನು ಒದಗಿಸುವಂತೆ ಒತ್ತಾಯಿಸಬೇಡಿ ಎಂದು ಕೇಳಿತ್ತು.  

        ಈ ಸಂಬಂಧ "ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ಅರ್ಜಿಯಲ್ಲಿ ಅಫಿಡವಿಟ್ ಸಲ್ಲಿಸಿದ್ದು, ಇದು ನಿರ್ದಿಷ್ಟವಾಗಿ CO-WIN ಪೋರ್ಟಲ್‌ನಲ್ಲಿ ನೋಂದಣಿಗೆ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ದಾಖಲಿಸುತ್ತದೆ ಮತ್ತು ಒಂಬತ್ತು ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಬಹುದು. ಆಧಾರ್ ವ್ಯಾಕ್ಸಿನೇಷನ್ ಪಡೆಯಲು ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.  

         ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಮಯಾಂಕ್ ಕ್ಷೀರಸಾಗರ್ ಅವರು ವಾದ ಮಂಡಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries