ಬೆಂಗಳೂರು: ಪ್ರೋ ಕಬ್ಬಡ್ಡಿ ಸೀಸನ್ 8 ಸದ್ಯ ಸೆಮಿಫೈನಲ್ ಹಂತಕ್ಕೆ ಬಂದು ತಲುಪಿದೆ. ಸೆಮಿಫೈನಲ್ ಪಂದ್ಯದಲ್ಲಿ ನಾಲ್ಕು ತಂಡಗಳು ಹಣಾಹಣಿ. ಫೈನಲ್ ತಲುಪಲು ಬೆಂಗಳೂರು ಬುಲ್ಸ್ ಮತ್ತು ದಬಂಗ್ ದೆಲ್ಲಿ ತಂಡಗಳ ನಡುವೆ ಪೈಪೋಟಿ.
ರಾತ್ರಿ 8.30 ಕ್ಕೆ ಆರಂಭವಾದ ಸೆಮಿಫೈನಲ್ ಪಂದ್ಯದಲ್ಲಿ ಪವನ್ ಶೆರಾವರ್ ನಾಯಕತ್ವದ ಬೆಂಗಳೂರು ಬುಲ್ಸ್ ತಂಡ ಮತ್ತು ಮಂಜಿತ್ ಚಿಲ್ಲರ್ ನಾಯಕತ್ವದ ದಬಂಗ್ ಡೆಲ್ಲಿ ತಂಡಗಳು ಆರಂಭದಿಂದಲೂ ಉತ್ತಮ ಪೈಪೋಟಿಯನ್ನ ನೀಡುತ್ತ ಬಂದಿದೆ.
ರೈಡ್ ಪಾಯಿಂಟ್‍ಗಳಲ್ಲಿ ಬೆಂಗಳೂರು ಬುಲ್ಸ್ ತಂಡ ಮೊದಲಾರ್ಧದ ಬ್ರೇಕ್ ಮುಂಚೆ 11 ಪಾಯಿಂಟ್‍ಗಳ ಉತ್ತಮ ಪ್ರದರ್ಶನ ನೀಡಿದೆ. ದಬಂಗ್ ಡೆಲ್ಲಿ ತಂಡವೂ ಕೂಡ ಯಾವುದರಲ್ಲೂ ಕಡೆಮೆಯಿಲ್ಲ ಎಂಬಂತೆ ಟಾಕಲ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಮೊದಲಾರ್ಧ ಮುಕ್ತಾಯಕ್ಕೆ ಬೆಂಗಳೂರು ಬುಲ್ಸ್ ತಂಡ 17 ಪಾಯಿಂಟ್ಸ್ ಮತ್ತು ದಬಂಗ್ ಡೆಲ್ಲಿ 16 ಪಾಯಿಂಟ್ಸ್ ಗಳೊಂದಿಗೆ ಒಂದು ಪಾಯಿಂಟ್ ಹಿನ್ನೆಡೆಯಲ್ಲಿತ್ತು.
ಬ್ರೇಕ್ ನಂತರ ಕಣಕ್ಕಿಳಿದ ದಬಂಗ್ ಡೆಲ್ಲಿ ತಂಡ ಫೀನಿಕ್ಸ್ ನಂತೆ ಆಟವನ್ನ ಆರಂಬಿಸಿದ 10 ನಿಮಿಷಗಳಲ್ಲಿ ಬುಲ್ಸ್ ತಂಡವನ್ನ ಆಲ್ ಔಟ್ ಮಾಡುವಲ್ಲಿ ಯಶಸ್ವಿಯಾಯಿತು. ಆಟದ ಕೊನೆಯ 3 ನಿಮಿಷಗಳ ಅವಧಿಯಲ್ಲಿ 37-30 ಪಾಯಿಂಟ್ ಗಳೊಂದಿಗೆ ದಬಂಗ್ ದೆಲ್ಲಿ 7 ಪಾಯಿಂಟ್ ಗಳ ಮುನ್ನಡೆಯನ್ನ ಸಾಧಿಸಿತ್ತು.
ಅಂತಿಮವಾಗಿ ಫೈನಲ್ ಕನಸನ್ನ ಜೀವಂತವಾಗಿಸಿಕೊಂಡ ದಬಂಗ್ ಡೆಲ್ಲಿ ತಂಡ ಬುಲ್ಸ್ ತಂಡವನ್ನ 35 ಪಾಂಯಿಟ್ ಗಳಿಗೆ ಕಟ್ಟಿಹಾಕಿ 5 ಪಾಯಿಂಟ್ ಗಳ ಮುನ್ನಡೆಯನ್ನ ಸಾಧಿಸಿ ಜಯಶೀಲರಾದರು.