ನವದೆಹಲಿ: ಯೂಕ್ರೇನ್- ರಷ್ಯಾ ಬಿಕ್ಕಟ್ಟು ವಿವಿಧ ರಾಷ್ಟ್ರಗಳ ಆರ್ಥಿಕತೆಯ ಮೇಲೆ ಭಾರಿ ತಲ್ಲಣ ಸೃಷ್ಟಿ ಮಾಡಿದೆ. ಷೇರುಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ಒಂದೇ ತಾಸಲ್ಲಿ 8 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಕುಸಿತ ಕಂಡಿದೆ.
ನವದೆಹಲಿ: ಯೂಕ್ರೇನ್- ರಷ್ಯಾ ಬಿಕ್ಕಟ್ಟು ವಿವಿಧ ರಾಷ್ಟ್ರಗಳ ಆರ್ಥಿಕತೆಯ ಮೇಲೆ ಭಾರಿ ತಲ್ಲಣ ಸೃಷ್ಟಿ ಮಾಡಿದೆ. ಷೇರುಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ಒಂದೇ ತಾಸಲ್ಲಿ 8 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಕುಸಿತ ಕಂಡಿದೆ.
ಭಾರತದ ಮೇಲೆಯೂ ಸಾಕಷ್ಟು ಪರಿಣಾಮ ಬೀರಿದ್ದು, ಬಿಎಸ್ಇ ಪಟ್ಟಿಯ ಕಂಪನಿಯ ಹೂಡಿಕೆದಾರರ ಸಂಪತ್ತು ಕೇವಲ ಒಂದು ಗಂಟೆ ಅವಧಿಯಲ್ಲಿ 8 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಕುಸಿದಿದೆ ಎನ್ನಲಾಗಿದೆ.
ಮುಂಬೈ ಷೇರುಪೇಟೆಯ ಪಟ್ಟಿಯಲ್ಲಿರುವ ಕಂಪನಿಗಳ ಮಾರುಕಟ್ಟೆ ಬಂಡವಾಳವು ಬೆಳಗ್ಗೆ 10.15ರ ಸುಮಾರಿಗೆ 2,47,46,960.48 ಕೋಟಿ ರೂಪಾಯಿಗೆ ಕುಸಿದಿದೆ. ಮಾರುಕಟ್ಟೆ ಬಂಡವಾಳ ಎಂದರೆ ಒಂದು ಕಂಪನಿಯ ಒಟ್ಟು ಷೇರುಗಳ ಮೌಲ್ಯವಾಗಿದೆ. ಇದು 2.48 ಸಾವಿರ ಕೋಟಿ ರೂಪಾಯಿಗೆ ಕುಸಿದಿದೆ. ಬುಧವಾರದ ಮುಂಬೈ ಷೇರು ಮಾರುಕಟ್ಟೆಯಲ್ಲಿ ವಹಿವಾಟು ಮುಕ್ತಾಯವಾದಾಗ ವಹಿವಾಟಿನ ಮುಕ್ತಾಯಕ್ಕೆ ಮಾರುಕಟ್ಟೆ ಬಂಡವಾಳವು 2,55,68,668.33 ಕೋಟಿ ರೂಪಾಯಿ ಇತ್ತು. ಈಗ 8.2 ಲಕ್ಷ ಕೋಟಿ ರೂಪಾಯಿ ಕುಸಿತವನ್ನು ಕಂಡಿದೆ.
ದೇಶದ ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರ ಮುಂಜಾನೆ ಶೇಕಡಾ 3ಕ್ಕಿಂತ ಹೆಚ್ಚು ಕುಸಿತ ಕಂಡಿವೆ. ಬಿಎಸ್ಇ ಸೆನ್ಸೆಕ್ಸ್ 1,718.99 ಪಾಯಿಂಟ್ಗಳು ಅಥವಾ ಶೇಕಡಾ 3ರಷ್ಟು ಕುಸಿದು 55,513.07 ಪಾಯಿಂಟ್ಗಳಿಗೆ ಇಳಿಕೆ ಕಂಡಿದೆ. ನಿಫ್ಟಿ 508.85 ಪಾಯಿಂಟ್ ಅಥವಾ ಶೇಕಡಾ 2.98ರಷ್ಟು ಕುಸಿದು 16,554.40 ಅಂಕಗಳಿಗೆ ತಲುಪಿದೆ.