HEALTH TIPS

ಆನ್‌ಲೈನ್ ಡಿಗ್ರಿಗಳನ್ನು ನೀಡಲು 900 ಸ್ವಾಯತ್ತ ಕಾಲೇಜುಗಳಿಗೆ ಅವಕಾಶ: ಯುಜಿಸಿ ನಿರ್ಧಾರ

              ನವದೆಹಲಿ:ಮುಂಬರುವ 2022-23ನೇ ಶೈಕ್ಷಣಿಕ ವರ್ಷದಿಂದ ಅತಿಯಾದ ಕಟ್‌ಆಫ್ ಅಂಕಗಳಿಂದಾಗಿ ತಮ್ಮ ಇಷ್ಟದ ಕಾಲೇಜಿಗೆ ಪ್ರವೇಶ ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳು ನಿರಾಶರಾಗಬೇಕಿಲ್ಲ. ಅವರಿಗೆ ಎರಡನೇ ಆಯ್ಕೆ ಲಭ್ಯವಾಗಲಿದೆ. ಸರಕಾರವು ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ 2035ರ ವೇಳೆಗೆ ಶೇ.50ರ ಒಟ್ಟು ದಾಖಲಾತಿ ಅನುಪಾತವನ್ನು ಸಾಧಿಸಲು ಪ್ರಮುಖ ಸುಧಾರಣೆಯೊಂದರಲ್ಲಿ ಆನ್ಲೈನ್ ಶಿಕ್ಷಣ ಕ್ಷೇತ್ರವನ್ನು ಮುಕ್ತಗೊಳಿಸಲಿದೆ.

           ಇದರಿಂದಾಗಿ ಜುಲೈ ನಂತರ ವಿವಿಗಳ ಜೊತೆಗೆ ದೇಶಾದ್ಯಂತದ ಸುಮಾರು 900 ಸ್ವಾಯತ್ತ ಕಾಲೇಜುಗಳಿಗೆ ಆನ್ ಲೈನ್ ಕೋರ್ಸ್ಗಳನ್ನು ಒದಗಿಸುವುದು ಸಾಧ್ಯವಾಗಲಿದೆ.

              ವಿದ್ಯಾರ್ಥಿಗಳಿಗೆ ಆನ್ ಲೈನ್ ಪದವಿಗಳನ್ನು ನೀಡಲು ಈ ಕಾಲೇಜುಗಳಿಗೆ ಹಸಿರು ನಿಶಾನೆ ತೋರಿಸಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ವು ನಿರ್ಧರಿಸಿದೆ. ವಿದ್ಯಾರ್ಥಿಗಳಿಗೆ ವ್ಯಾಪಕ ಕಲಿಕೆಯ ಅವಕಾಶವನ್ನು ಒದಗಿಸಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಆನ್ ಲೈನ್ ಕೋರ್ಸ್ ಗಳ ಮೂಲಕ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗದೆ ಪದವಿಗಳನ್ನು ಪಡೆಯಲು ಸಾಧ್ಯವಾಗಲಿದೆ.

              ಪ್ರಸ್ತುತ ಆನ್ ಲೈನ್ ಕೋರ್ಸ್‌ ಗಳ ಮೂಲಕ ದೂರ ಪದವಿಗಳನ್ನು ನೀಡಲು ವಿವಿಗಳಿಗೆ ಮಾತ್ರ ಅವಕಾಶವಿದೆ,ಆದರೆ ಯುಜಿಸಿಯ ನೂತನ ಆದೇಶದೊಂದಿಗೆ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನ (ಎನ್‌ಐಆರ್‌ಎಫ್) ಹಿಂದಿನ ಮೂರು ರ್ಯಾಂಕಿಂಗ್ಗಳಲ್ಲಿ ತಮ್ಮ ವಿಷಯ ವರ್ಗದಲ್ಲಿ ಎರಡು ಬಾರಿ ಉನ್ನತ 100 ರ್ಯಾಂಕ್ಗಳನ್ನು ಪಡೆದಿರುವ ಅಥವಾ ನ್ಯಾಕ್ನಿಂದ ಕನಿಷ್ಠ 3.26 ಗ್ರೇಡ್ ಅನ್ನು ಪಡೆದಿರುವ ಸುಮಾರು 900 ಸ್ವಾಯತ್ತ ಕಾಲೇಜುಗಳಿಗೆ ಆನ್ಲೈನ್ ಪದವಿ ಕೋರ್ಸ್ಗಳನ್ನು ಆರಂಭಿಸಲು ಅವಕಾಶ ನೀಡಲಾಗಿದೆ.

              ಇದಕ್ಕಾಗಿ ಕಾಲೇಜುಗಳು ಯುಜಿಸಿಯ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ,ಆದರೆ ಅದು ಹೊರಡಿಸಿರುವ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಪಾಲಿಸಬೇಕಾಗುತ್ತದೆ.
ವರದಿಗಳ ಪ್ರಕಾರ ಆನ್ ಲೈನ್ ಕೋರ್ಸ್ಗಳಿಗೆ ಸೇರಲು ವಿದ್ಯಾರ್ಥಿಗಳು ಸಾಂಪ್ರದಾಯಿಕ ಕೋರ್ಸ್ಗಳಂತೆ 12ನೇ ತರಗತಿಯ ಪರೀಕ್ಷೆಯಲ್ಲಿ ನಿರ್ದಿಷ್ಟ ಅಂಕಗಳನ್ನು ಗಳಿಸಿರಬೇಕಿಲ್ಲ. ಆನ್ ಲೈನ್ ಪದವಿ ಕೋರ್ಸ್ಗಳಿಗೆ ಹಾಜರಾಗುವ ವಿದ್ಯಾರ್ಥಿಗಳು 12ನೇ ತರಗತಿಯಲ್ಲಿ ಮತ್ತು ಆನ್ ಲೈನ್ ಸ್ನಾತಕೋತ್ತರ ಪದವಿ ಕೋರ್ಸ್ಗಳಿಗೆ ಹಾಜರಾಗಲು ಸಂಬಂಧಿಸಿದ ಪದವಿ ಕೋರ್ಸ್ನಲ್ಲಿ ತೇರ್ಗಡೆಯಾಗಿದ್ದರೆ ಸಾಕು.

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ)ಯು ಆನ್ಲೈನ್ ಪ್ರೊಕ್ಟರ್ಡ್ ಮೋಡ್ ಅಥವಾ ಕಂಪ್ಯೂಟರ್ ಆಧಾರಿತ ಪರೀಕ್ಷೆ, ಸಿಬಿಟಿ ಫಾರ್ಮ್ಯಾಟ್ ಮೂಲಕ ವಿದ್ಯಾರ್ಥಿಗಳ ಮೌಲ್ಯಮಾಪನವನ್ನು ನಡೆಸುತ್ತದೆ. ವಿದ್ಯಾರ್ಥಿಗಳು ಸಾಂಪ್ರದಾಯಿಕ ಕೋರ್ಸ್ಗಳಂತೆ ಆನ್ ಲೈನ್ ಪದವಿ ಕಾರ್ಯಕ್ರಮಗಳಿಗೆ ಕನಿಷ್ಠ ಶೇ.75ರಷ್ಟು ಹಾಜರಾತಿಯನ್ನು ಹೊಂದಿರಬೇಕು.

             ಆನ್ ಲೈನ್ ಪದವಿ ಕೋರ್ಸ್ಗಳು ಕಲಿಕೆಯ ವಿಧಾನವಲ್ಲದೆ ಇತರ ಹಲವಾರು ಅಂಶಗಳಲ್ಲಿ ಸಾಂಪ್ರದಾಯಿಕ ಕೋರ್ಸ್ಗಳಿಂದ ಭಿನ್ನವಾಗಿರುತ್ತವೆ. ಈ ದೂರಶಿಕ್ಷಣ ಕೋರ್ಸ್ಗಳು ಹೆಚ್ಚಿನ ನಮ್ಯತೆಯನ್ನು ಮತ್ತು ಹಲವಾರು ಆಯ್ಕೆಗಳನ್ನು ಹೊಂದಿರುತ್ತವೆ. ಯುಜಿಸಿಯು ವಿವರವಾದ ಮಾರ್ಗಸೂಚಿಗಳನ್ನು ಮಾರ್ಚ್ನಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries