HEALTH TIPS

ವಾಣಿಜ್ಯ ಬಳಕೆ ಸಿಲಿಂಡರ್​ ಬೆಲೆಯಲ್ಲಿ 91.50 ರೂ. ಇಳಿಕೆ

          ನವದೆಹಲಿ: ವಾಣಿಜ್ಯ ಬಳಕೆ ಸಿಲಿಂಡರ್​ ಬೆಲೆಯಲ್ಲಿ ಮತ್ತೆ ಇಳಿಕೆ ಕಂಡುಬಂದಿದ್ದು, 19 ಕೆಜಿಯ ಪ್ರತೀ ಸಿಲಿಂಡರ್ ಬೆಲೆಯಲ್ಲಿ 91.50 ರೂ. ಇಳಿಕೆ ಮಾಡಲಾಗಿದೆ.


         ಎಲ್​ಪಿಜಿ ಸಿಲಿಂಡರ್​ಗಳ ನವೀಕೃತ ಬೆಲೆಯನ್ನು ತೈಲು ಮಾರುಕಟ್ಟೆ ಕಂಪನಿಗಳು (OMCs)ಬಿಡುಗಡೆ ಮಾಡಿದ್ದು, 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್​ಗಳ ಬೆಲೆಯನ್ನು 91.50 ರೂಪಾಯಿ ಇಳಿಸಲಾಗಿದೆ. ಈ ಮೂಲಕ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ  ಬಳಕೆ ಸಿಲಿಂಡರ್​ ಬೆಲೆ 1,907 ರೂಪಾಯಿ ಆಗಿದೆ. 

          ಡಿಸೆಂಬರ್​ವರೆಗೂ ಒಂದೇ ಸಮನೆ ಏರಿಕೆಯಾಗುತ್ತಿದ್ದ ಕಮರ್ಷಿಯಲ್ ಸಿಲಿಂಡರ್ ಬೆಲೆ ಜನವರಿಯಲ್ಲಿ 102 ರೂಪಾಯಿ ಇಳಿಕೆಯಾಗಿತ್ತು. ಇದೀಗ ಫೆಬ್ರವರಿಯಲ್ಲಿ ಕೂಡ ಕಡಿತಗೊಂಡಿದ್ದು ಗ್ರಾಹಕರು ಅಂದರೆ ರೆಸ್ಟೋರೆಂಟ್​, ಹೋಟೆಲ್​ ಮಾಲೀಕರಿಗೆ ನಿರಾಳತೆ ಮೂಡಿಸಿದೆ. 

         ಡಿಸೆಂಬರ್​ 1ರಂದು 19 ಕೆಜಿ ಎಲ್​​ಪಿಜಿ ಸಿಲಿಂಡರ್​ ಬೆಲೆ 100 ರೂಪಾಯಿ ಏರಿಕೆಯಾಗಿತ್ತು. ಅಲ್ಲಿಗೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ 2101 ರೂಪಾಯಿ ಆಗಿತ್ತು.  ಡಿಸೆಂಬರ್​​ನಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್​ ಬೆಲೆ ದೆಹಲಿಯಲ್ಲಿ 2101 ರೂಪಾಯಿ ಆಗಿದ್ದು ಗ್ರಾಹಕರಿಗೆ ಬಹುದೊಡ್ಡ ಹೊರೆಯಾಗಿತ್ತು.  2012-13ರಲ್ಲಿ 2,200ರೂ.ಗೆ ತಲುಪಿದ ಮೇಲೆ ಅಷ್ಟೆಲ್ಲ ಏರಿಕೆಯಾಗಿರಲಿಲ್ಲ. 

          ಆದರೆ ಜನವರಿ 1 ರಂದು ತೈಲ ಮಾರುಕಟ್ಟೆ ಕಂಪನಿಗಳು 102.50 ರೂಪಾಯಿ ಕಡಿತಗೊಳಿಸಿದರೂ, ಸಿಲಿಂಡರ್​ ಬೆಲೆ 2 ಸಾವಿರ ರೂಪಾಯಿ ಮೇಲ್ಪಟ್ಟೇ ಇತ್ತು. ಇನ್ನು ಸಬ್ಸಿಡಿ ರಹಿತ (14.KG) ಇಂಡೇನ್​ ಎಲ್​ಪಿಜಿ ಸಿಲಿಂಡರ್​ ಬೆಲೆ ದೆಹಲಿಯಲ್ಲಿ 899.50 ರೂಪಾಯಿ ಇದೆ. ಮುಂಬೈನಲ್ಲಿ ಈ ಬೆಲೆ ದೆಹಲಿಯಲ್ಲದ್ದಷ್ಟೇ ಇದ್ದರೆ, ಕೋಲ್ಕತ್ತದಲ್ಲಿ 14 ಕೆಜಿ ಸಬ್ಸಿಡಿ ರಹಿತ ಎಲ್​ಪಿಜಿ ಸಿಲಿಂಡರ್​ ಬೆಲೆ 926 ರೂಪಾಯಿ ಇದೆ ಎಂದು ತಿಳಿದುಬಂದಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries