ಕಾಸರಗೋಡು: ಜಿಲ್ಲೆಯ ನೀಲೇಶ್ವರ, ಕೋಟಪುರ, ಕಯ್ಯೂರ್ ಚೆಂಬ್ರಂಗಾನ ಮುಂತಾದೆಡೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಅತಿಯಾದ ಭಾರ ಹೇರಿಕೊಂಡು ಸಂಚರಿಸುತ್ತಿದ್ದ ಲಾರಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇವುಗಳಲ್ಲಿ ಬಹುತೇಖ ಮರದ ದಿಮ್ಮಿ ಸಾಗಾಟದ ಲಾರಿಗಳಾಗಿದೆ. ಕಾನೂನು ಉಲ್ಲಂಘಿಸುವ ರೀತಿಯಲ್ಲಿ ಅತಿಯಾದ ಭಾರ ಹೇರಿಕೊಂಡು ಸಂಚರಿಸುತ್ತಿರುವ ಲಾರಿಗಳಿಂದ ಅಪಘಾತ ಭೀತಿ ಎದುರಾಗುತ್ತಿರುವುದನ್ನು ಮನಗಂಡು ಅಧಿಕಾರಿಗಳು ಕಾರ್ಯಾಚರಣೆಗೆ ಮುಂದಾಗಿದ್ದರು. ಒಟ್ಟು ಆರು ಬೃಹತ್ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಇವುಗಳಿಂದ 91500ರೂ. ದಂಡ ವಸೂಲಿ ಮಾಡಲಾಗಿದೆ. ಆರ್.ಟಿ.ಓ (ಎನ್‍ಫೋರ್ಸ್‍ಮೆಂಟ್)ಡೇವಿಡ್ ಅವರ ನಿರ್ದೇಶದನ್ವಯ ಈ ದಾಲಿ ಆಯೋಜಿಸಲಾಗಿದೆ.